ಜಿಲ್ಲೆ

ಕರೊನಾ ಜಾಗೃತಿ ವಹಿಸುವುದು ಅಗತ್ಯ

ಬಸವಕಲ್ಯಾಣ: ಕರೊನಾ ಜಗತ್ತಿಗೆ ದೊಡ್ಡ ಸವಾಲಾಗಿದೆ. ಸೋಂಕಿನಿಂದ ಮೃತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಕೋವಿಡ್ -19 ತಡೆಗಟ್ಟಬೇಕಾದರೆ ಪ್ರತಿಯೊಬ್ಬರು ಕಡ್ಡಾಯವಾಗಿ ಪರಸ್ಪರ ಅಂತರ ಕಾಪಾಡಬೇಕು, ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು, ಸಾಬೂನಿನಿಂದ ಕೈ ತೊಳೆಯಬೇಕು, ಆಗಾಗ ಗೋಮೂತ್ರ ಸೇವಿಸಬೇಕು ಎಂದು ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರರು ಸಲಹೆ ನೀಡಿದರು.

ಗುಂಡೂರದಲ್ಲಿ ಯುವಕರು ಹಾಗೂ ಭಕ್ತರಿಂದ ಆಯೋಜಿಸಿದ್ದ ತ್ರಿಪುರಾಂತ ಗವಿಮಠದ ಪಟ್ಟಾಧ್ಯಕ್ಷ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಜನ್ಮ ದಿನೋತ್ಸವ, ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ನಿಮಿತ್ತ ಕರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರೊ.ಸೂರ್ಯಕಾಂತ ಶೀಲವಂತ ಮಾತನಾಡಿ, ಅಭಿನವ ಶ್ರೀಗಳು ತಮ್ಮ ಜನ್ಮದಿನವನ್ನು ಅತ್ಯಂತ ಸರಳವಾಗಿ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಕರೊನಾ ಮಹಾಮಾರಿ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು. ಲೋಕೇಶ ಜೋಕಾರೆ, ವೀರಶೆಟ್ಟಿ ಪಾಟೀಲ್, ಶಿವಕುಮಾರ ಮಠಪತಿ, ಲೋಕೇಶ ಮೋಳಕೆರೆ, ಶಿವಕುಮಾರ ಗಿಲ್ಕೆ, ವಿಜಯಕುಮಾರ ಸ್ವಾಮಿ, ರಾಜಕುಮಾರ ಬಿರಾದಾರ, ಲಖ್ಖನ್ ರೆಡ್ಡಿ, ಆದೀಶ ಮಾಚನಾಳೆ ಇತರರಿದ್ದರು.