ಜಿಲ್ಲೆ

ಕರೊನಾ ಕೈ ಮೀರುವುದಷ್ಟೇ ಬಾಕಿ!

ಧಾರವಾಡ: ಜಿಲ್ಲೆಯಲ್ಲಿ ಬುಧವಾರ 89 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 657ಕ್ಕೆ ಏರಿಕೆಯಾಗಿದೆ. ಹೆಮ್ಮಾರಿಗೆ ಬಲಿಯಾದವರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ಆತಂಕ ದುಪ್ಪಟ್ಟಾಗಿದೆ.

ಬುಧವಾರ ಸಹ ಹುಬ್ಬಳ್ಳಿಯದ್ದೇ ಸಿಂಹಪಾಲು ಇದ್ದು, ಬರೋಬ್ಬರಿ 60 ಪ್ರಕರಣಗಳು ವರದಿಯಾಗುವ ಮೂಲಕ ಅಪಾಯವನ್ನು ಸಾರಿ ಸಾರಿ ಹೇಳಿದಂತಾಗಿದೆ. ಧಾರವಾಡ ತಾಲೂಕಿನಲ್ಲಿ 19 ಪ್ರಕರಣ ಪತ್ತೆಯಾಗಿದ್ದರೆ, ಪಕ್ಕ ಜಿಲ್ಲೆಗಳಾದ ಬೆಳಗಾವಿ 2, ಹಾವೇರಿ, ಗದಗ, ಬಳ್ಳಾರಿಯ ತಲಾ 1 ಪ್ರಕರಣಗಳು ಖಚಿತವಾಗಿವೆ.

ಪ್ರಕರಣಗಳ ಸ್ಥೂಲ ಮಾಹಿತಿ ಈ ಮುಂದಿನಂತಿದೆ.

ಹುಬ್ಬಳ್ಳಿ ತಾಲೂಕು: ಜೂ. 6ರಂದು ಸೋಂಕು ದೃಢಪಟ್ಟ ಹುಬ್ಬಳ್ಳಿ ಗಣೇಶಪೇಟೆ 56 ವರ್ಷದ ಮಹಿಳೆಯಿಂದ ಒಡ್ಡರ ಓಣಿ 45 ವರ್ಷದ ಪುರುಷ, ಜು. 6ರಂದು ಸೋಂಕು ದೃಢಪಟ್ಟ ಹುಬ್ಬಳ್ಳಿ ಕಿಮ್್ಸ ಆವರಣದ 26 ವರ್ಷದ ಯುವಕನಿಂದ ಜನ್ನತ್​ನಗರದ 53 ವರ್ಷದ ಮಹಿಳೆ, ಜು. 5ರಂದು ಸೋಂಕು ತಗುಲಿದ್ದ ಕೇಶ್ವಾಪುರದ 57 ವರ್ಷದ ಮಹಿಳೆಯಿಂದ ಅದೇ ಪ್ರದೇಶದ 19 ವರ್ಷದ ಯುವಕ, ಜು. 4ರಂದು ಸೋಂಕು ದೃಢಪಟ್ಟ ಧಾರವಾಡ ಸೋಮಾಪುರ ಗ್ರಾಮದ 30 ವರ್ಷದ ಮಹಿಳೆಯಿಂದ ಹುಬ್ಬಳ್ಳಿ ಶಿರೂರ ಪಾರ್ಕ್​ನ 37 ವರ್ಷದ ಪುರುಷ, ಜೂ. 22ರಂದು ಸೋಂಕು ದೃಢಪಟ್ಟ ನವಲಗುಂದ ತಾಲೂಕು ಮೊರಬ ಗ್ರಾಮದ 72 ವರ್ಷದ ವೃದ್ಧೆಯಿಂದ ಹುಬ್ಬಳ್ಳಿ ಕೇಶ್ವಾಪುರದ 58 ವರ್ಷದ ಮಹಿಳೆ, 65 ವರ್ಷದ ವೃದ್ಧ, 32 ವರ್ಷದ ಮಹಿಳೆ, 56 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

ಕೆಮ್ಮು, ನೆಗಡಿ, ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹುಬ್ಬಳ್ಳಿ ಮುಲ್ಲಾ ಓಣಿಯ 78 ವರ್ಷದ ಪುರುಷ, ಪಠಾಣಗಲ್ಲಿಯ 62 ವರ್ಷದ ಪುರುಷ, ಕೇಶ್ವಾಪುರ ಸಿದ್ಧಲಿಂಗೇಶ್ವರ ಓಣಿಯವರಾದ 25 ವರ್ಷದ ಯುವತಿ, 37 ವರ್ಷದ ಪುರುಷ, ಬೆಂಗೇರಿಯ 46 ವರ್ಷದ ಪುರುಷ, ನಾಗಶೆಟ್ಟಿಕೊಪ್ಪದ 40 ವರ್ಷದ ಪುರುಷ, ಗೋಪನಕೊಪ್ಪದ 22 ವರ್ಷದ ಯುವಕ, ದೇವಾಂಗಪೇಟೆ ಸಿಲ್ವರ್ ಪಾರ್ಕ್​ನ 62 ವರ್ಷದ ಪುರುಷ, ವಿಶ್ವೇಶ್ವರ ನಗರದ 32 ವರ್ಷದ ಮಹಿಳೆ, ಆದರ್ಶ ನಗರದ 73 ವರ್ಷದ ವೃದ್ಧ, ಕುಸುಗಲ್ ರಸ್ತೆ ದೇಸಾಯಿ ಪಾರ್ಕ್​ನ 42 ವರ್ಷದ ಪುರುಷ, ಭೂಸಪೇಟೆಯ 38 ವರ್ಷದ ಪುರುಷ, ಮಂಗಳವಾರಪೇಟೆಯ 46 ವರ್ಷದ ಪುರುಷ, ಸಿಬಿಟಿ 2ನೇ ಕ್ರಾಸ್​ನ 52 ವರ್ಷದ ಪುರುಷ, ಶಿವಾನಂದ ನಗರದ 45 ವರ್ಷದ ಮಹಿಳೆ, ಕೇಶ್ವಾಪುರದ 21 ವರ್ಷ, 23 ವರ್ಷದ ಯುವಕರು, ಮಂಟೂರ ರಸ್ತೆ ಪ್ರದೇಶದವರಾದ 45 ವರ್ಷದ ಪುರುಷ, 43 ವರ್ಷದ ಪುರುಷ ಮತ್ತು 62 ವರ್ಷದ ವೃದ್ಧ, ನೇಕಾರ ನಗರದ 22 ವರ್ಷದ ಯುವಕ, ಅಮರಗೋಳದ 44 ವರ್ಷದ ಪುರುಷ, ವಿಕ್ಟೋರಿಯಾ ರಸ್ತೆಯ 65 ವರ್ಷದ ವೃದ್ಧ, ಚೇತನಾ ಕಾಲನಿ 4ನೇ ಕ್ರಾಸ್​ನವರಾದ 42 ವರ್ಷದ ಪುರುಷ, 41 ವರ್ಷದ ಮಹಿಳೆ, 14 ವರ್ಷದ ಬಾಲಕ, 16 ವರ್ಷದ ಬಾಲಕ, ಹಳೇಹುಬ್ಬಳ್ಳಿ ಅಲ್ಹಾಯತ್ ಸ್ಕೂಲ್ ಬಳಿಯ 24 ವರ್ಷದ ಮಹಿಳೆ, ದಿವಟೆ ಓಣಿಯ 35 ವರ್ಷದ ಮಹಿಳೆ, ಅಂಬೇಡ್ಕರ್ ಕಾಲನಿಯ 3 ವರ್ಷದ ಬಾಲಕಿ, ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಬಳಿಯ 38 ವರ್ಷದ ಮಹಿಳೆ, ಅಲ್ತಾಫ್ ಪ್ಲಾಟ್​ನ 42 ವರ್ಷದ ಪುರುಷ, ಬಂಡಿವಾಡ್ ಬೇಸ್​ನ 51 ವರ್ಷದ ಪುರುಷ, ನವಅಯೋಧ್ಯಾನಗರದ 29 ವರ್ಷದ ಪುರುಷ, ಹುಬ್ಬಳ್ಳಿ ಓರಿಯಂಟಲ್ ಶಾಲೆ ಬಳಿಯ 20 ವರ್ಷದ ಪುರುಷ, ಆನಂದ ನಗರದವರಾದ 26 ವರ್ಷದ ಮಹಿಳೆ, 11 ವರ್ಷದ ಬಾಲಕಿ, ಮಿಲನಾ ಕಾಲನಿಯ 40 ವರ್ಷದ ಪುರುಷ, ಬ್ಯಾಹಟ್ಟಿ ಗ್ರಾಮದ 38 ವರ್ಷದ ಪುರುಷನಿಗೆ ಕರೊನಾ ತಗುಲಿದೆ.

ಹುಬ್ಬಳ್ಳಿ ಈಶ್ವರ ನಗರದ 42 ವರ್ಷದ ಪುರುಷ, ವಿದ್ಯಾನಗರದ 36 ವರ್ಷದ ಪುರುಷ, ಗುರುನಾಥನಗರದ 63 ವರ್ಷದ ಮಹಿಳೆ, ಕಟಗರ ಓಣಿ 55 ವರ್ಷದ ಮಹಿಳೆ, ಕಾಳಿದಾಸನಗರ ಬನಶಂಕರಿ ಬಡಾವಣೆಯ 28 ವರ್ಷದ ಯುವತಿ, ಬೆಂಗೇರಿಯ 85 ವರ್ಷದ ವೃದ್ಧೆ, ಗೋಕುಲ ರಸ್ತೆಯ 31 ವರ್ಷದ ಪುರುಷ, ವಿದ್ಯಾನಗರದ 29 ವರ್ಷದ ಯುವತಿ, ಬಸವೇಶ್ವರ ನಗರ 68 ವರ್ಷದ ವೃದ್ಧ, ದಾಜಿಬಾನ ಪೇಟೆಯ 43 ವರ್ಷದ ಮಹಿಳೆ, ಕಿಮ್ಸ್​ನ 26 ವರ್ಷದ ಯುವತಿ, ಸಿಲ್ವರ ಟೌನ್​ನ 57 ವರ್ಷದ ಪುರುಷ, ಮೇದಾರ ಓಣಿಯ 28 ವರ್ಷದ ಯುವಕ, ಕೇಶ್ವಾಪುರ ಬಾಲಾಜಿ ಅಪಾರ್ಟ್​ವೆುಂಟ್​ನ 38 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ.

ಧಾರವಾಡ ತಾಲೂಕು: ಜು. 7ರಂದು ಸೋಂಕು ದೃಢಪಟ್ಟ ಧಾರವಾಡ ಮದಿಹಾಳದ 55 ವರ್ಷದ ಮಹಿಳೆಯಿಂದ ಅದೇ ಪ್ರದೇಶದ 34 ವರ್ಷದ ಪುರುಷ, ಜೂ. 26ರಂದು ಸೋಂಕು ತಗುಲಿದ ಹುಬ್ಬಳ್ಳಿ ಕೌಲ್​ಪೇಟೆಯ 7 ವರ್ಷದ ಬಾಲಕನಿಂದ ಧಾರವಾಡ ತಿರುಪತಿ ಅಪಾರ್ಟ್​ವೆುಂಟ್​ನ 40 ವರ್ಷದ ಪುರುಷ, 17 ವರ್ಷದ ಯುವಕನಿಗೆ ಸೋಂಕು ತಗುಲಿದೆ.

ಕೆಮ್ಮು, ನೆಗಡಿ, ಜ್ವರ, ಉಸಿರಾಟ ತೊಂದರೆಯಿರುವ ಧಾರವಾಡ ಹೊಸಯಲ್ಲಾಪುರ ಬಸ್ತಿ ಓಣಿಯ 35 ವರ್ಷದ ಮಹಿಳೆ, ಸೋನಾಪುರ 4ನೇ ಕ್ರಾಸ್​ನ 47 ವರ್ಷದ ಮಹಿಳೆ, ಜಯನಗರ ಜನತಾ ಕ್ವಾರ್ಟರ್ಸ್​ನ 20 ವರ್ಷದ ಯುವಕ, ಜಯನಗರ ಜನತಾ ಪ್ಲಾಟ್​ನ 44 ವರ್ಷದ ಪುರುಷ, ಗಾಂಧಿಚೌಕ್ ದೇಸಾಯಿ ಓಣಿಯ 52 ವರ್ಷದ ಪುರುಷ, ಚರಂತಿಮಠ ಗಾರ್ಡನ್​ನ 73 ವರ್ಷದ ಪುರುಷ, ಧಾರವಾಡ ಶಿವಗಿರಿ ಬಾರಾಕೋಟ್ರಿ ಮಸಜೀದ ಬಳಿಯ 36 ವರ್ಷದ ಪುರುಷ, ಹಿರೇಮಠ ಕಾಲನಿಯ 42 ವರ್ಷದ ಮಹಿಳೆ, ಕಂಠಿ ಓಣಿಯ 48 ವರ್ಷದ ಮಹಿಳೆ, ಕೆಲಗೇರಿ ಹೊಸೂರ ಓಣಿಯ 25 ವರ್ಷದ ಪುರುಷ, ಸರಸಗಂಗಾ ನಗರದ 65 ವರ್ಷದ ವೃದ್ಧ, ಮಂಗಳವಾರಪೇಟೆಯ 25 ವರ್ಷದ ಪುರುಷ, ಮಾಳಾಪುರ ಲಾಸ್ಟ್ ಬಸ್​ಸ್ಟಾಪ್ ಬಳಿಯ 35 ವರ್ಷದ ಪುರುಷ, ಹೊಸ ಎಪಿಎಂಸಿ ಬಳಿಯ ಮಟ್ಟಿ ಪ್ಲಾಟ್​ನ 12 ವರ್ಷದ ಬಾಲಕಿ, ಕೊಪ್ಪದಕೇರಿ 1ನೇ ಕ್ರಾಸ್​ನ 21 ವರ್ಷದ ಪುರುಷನಲ್ಲಿ ವೈರಸ್ ದೃಢಪಟ್ಟಿದೆ.

ಧಾರವಾಡ ನಿಜಾಮುದ್ದೀನ್ ಕಾಲನಿ 4ನೇ ಕ್ರಾಸ್​ನ 22 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಜೂ. 22ರಂದು ಸೋಂಕು ದೃಢಪಟ್ಟ ನವಲಗುಂದ ತಾಲೂಕು ಮೊರಬ ಗ್ರಾಮದ 72 ವರ್ಷದ ವೃದ್ಧೆಯಿಂದ ಅಣ್ಣಿಗೇರಿಯ 53 ವರ್ಷದ ಪುರುಷ, 49 ವರ್ಷದ ಪುರುಷನಿಗೆ ಕರೊನಾ ತಾಗಿದೆ.

ಕುಂದಗೋಳ ತಾಲೂಕು ಯರೆಬೂದಿಹಾಳ ಗ್ರಾಮದ 16 ವರ್ಷದ ಯುವಕ, ಅಳ್ನಾವರ ಪಟ್ಟಣದ 41 ವರ್ಷದ ಮಹಿಳೆಗೆ ರೋಗ ತಗುಲಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಬಳ್ಳಾರಿ ಜಿಲ್ಲೆಯ ಚಿತ್ತವಾಡಗಿ ಗ್ರಾಮದ 65 ವರ್ಷದ ವೃದ್ಧ, ಗದಗ ಜಿಲ್ಲೆ ಮುಂಡರಗಿಯ 54 ವರ್ಷದ ಮಹಿಳೆ, ಹಾವೇರಿಯ 70 ವರ್ಷದ ವೃದ್ಧನಿಗೆ, ಬೆಳಗಾವಿ ಜಿಲ್ಲೆ ಸವದತ್ತಿಯ 30 ವರ್ಷದ ಪುರುಷ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಮೂಗಬಸವ ಗ್ರಾಮದ 60 ವರ್ಷದ ವೃದ್ಧನಿಗೆ ಕೋವಿಡ್ ದೃಢಪಟ್ಟಿದೆ.

ತಾಲೂಕು ಸಂಖ್ಯೆ

ಹುಬ್ಬಳ್ಳಿ 60

ಧಾರವಾಡ 19

ಅಣ್ಣಿಗೇರಿ 2

ನವಲಗುಂದ 1

ಅಳ್ನಾವರ 1

ಕುಂದಗೋಳ 1

ಅಳ್ನಾವರದಲ್ಲಿ ಮೊದಲ ಕರೊನಾ

ಅಳ್ನಾವರ: ಇಲ್ಲಿಯವರೆಗೆ ಕರೊನಾ ಸೋಂಕಿನಿಂದ ಮುಕ್ತವಾಗಿದ್ದ ತಾಲೂಕಿನಲ್ಲಿ ಬುಧವಾರ ಮೊದಲ ಕರೊನಾ ಪ್ರಕರಣ ಪತ್ತೆಯಾಗಿದೆ. ಪಟ್ಟಣದ ಹೊರವಲಯದ ಮಾಣಕಾಪುರದಲ್ಲಿ 41 ವರ್ಷದ ಮಹಿಳೆಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು, ಚಿಕಿತ್ಸೆಗಾಗಿ 3 ದಿನಗಳ ಹಿಂದೆ ಬೆಳಗಾವಿ ಕೆಎಲ್​ಇ ಆಸ್ಪತ್ರೆಗೆ ಹೋಗಿ ಬಂದಿದ್ದರು. ಹೀಗಾಗಿ ಈ ಪ್ರದೇಶ ಹಾಗೂ ಇಲ್ಲಿಗೆ ಸಂಪರ್ಕ ಕಲ್ಪಿಸುವ ಬೆಣಚಿ, ಡೋರಿ, ಅಂಬೋಳ್ಳಿ ಗ್ರಾಮಗಳ ರಸ್ತೆಗಳನ್ನು ಪಟ್ಟಣ ಪಂಚಾಯಿತಿ ಬುಧವಾರ ರಾತ್ರಿ ಸೀಲ್​ಡೌನ್ ಮಾಡಿ, ರಾಸಾಯನಿಕ ದ್ರಾವಣ ಸಿಂಪಡಿಸಿದೆ.

3 ದಿನಗಳಲ್ಲಿ 7 ಜನರ ಮರಣ

ಧಾರವಾಡ: ಕೋವಿಡ್​ನಿಂದಾಗಿ ಕಳೆದ 3 ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 7 ಜನ ಸಾವಿಗೀಡಾಗಿದ್ದಾರೆ. ಇದರಿಂದ ಮೃತರ ಸಂಖ್ಯೆ20ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯ 70 ವರ್ಷದ ಪುರುಷ ಭಾನುವಾರ ಮರಣ ಹೊಂದಿದ್ದಾನೆ. ಆತನಿಗೆ ಮಂಗಳವಾರ ಕೋವಿಡ್ ದೃಢಪಟ್ಟಿದೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ 54 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಎಸ್​ಡಿಎಂ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾಳೆ.

ಬಳ್ಳಾರಿ ಜಿಲ್ಲೆ ಹೊಸಪೇಟೆಯ 65 ವರ್ಷದ ಪುರುಷ ಎಸ್​ಡಿಎಂ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾನೆ.

ಹುಬ್ಬಳ್ಳಿ ಮಂಟೂರ ರಸ್ತೆಯ 62 ವರ್ಷದ ಪುರುಷ ಭಾನುವಾರ ಮೃತಪಟ್ಟಿದ್ದಾನೆ.

ಹುಬ್ಬಳ್ಳಿಯ 85 ವರ್ಷದ ಮಹಿಳೆ ಶಸ್ತ್ರಚಿಕಿತ್ಸೆಗಾಗಿ ಸೋಮವಾರ ಕಿಮ್ಸ್​ಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಗಾಗಿ ಮೂಗು ಮತ್ತು ಗಂಟಲ ದ್ರವ ಪರೀಕ್ಷೆಗೆ ತೆಗೆದುಕೊಂಡು ಮನೆಗೆ ಕಳುಹಿಸಲಾಗಿತ್ತು. ಮನೆಯಲ್ಲಿ ಮೃತಪಟ್ಟಿದ್ದು, ಮಂಗಳವಾರ ಕೋವಿಡ್ ದೃಢಪಟ್ಟಿದೆ.

ನವಲಗುಂದ ತಾಲೂಕು ಶಿರಕೋಳದ 34 ವರ್ಷದ ಪುರುಷ ಸೋಮವಾರ ಮೃತಪಟ್ಟಿದ್ದಾನೆ. ನವಲಗುಂದ ತಾಲೂಕು ಮೊರಬ ಗ್ರಾಮದ 65 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದನು, ಮಂಗಳವಾರ ಮೃತಪಟ್ಟಿದ್ದಾನೆ.

ಪಾರ್ಥಿವ ಶರೀರಗಳನ್ನು ಜಿಪ್ ಉಳ್ಳ 2 ಲೇಯರ್ ಕವರ್​ಗಳಲ್ಲಿ ಹಾಕಿ, ನಿಯಮಾನುಸಾರ ಶವಸಂಸ್ಕಾರ ನೆರವೇರಿಸಲಾಗಿದೆ.