ಜಿಲ್ಲೆ

ಕರೊನಾ ಎರಡನೇ ಅಲೆ, ಜಾಗೃತಿ ಇರಲಿ

ಯಲ್ಲಾಪುರ: ಕರೊನಾ ಎರಡನೇ ಅಲೆ ವ್ಯಾಪಿಸುತ್ತಿದ್ದು, ಜನ ಜಾಗೃತರಾಗಬೇಕು. ನಿರ್ಲಕ್ಷ್ಯ ತಾಳದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಅವರು ತಾಲೂಕಿನ ಕೋಳಿಕೇರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ಭಾನುವಾರ ತಾಲೂಕು ಯುತ್ ಕ್ಲಬ್ ಹಾಗೂ ಆರೋಗ್ಯ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ, ಕಾಯಿಲೆಗಳಿಂದ ಬಳಲುತ್ತಿರುವವರು ಕರೊನಾ ಲಸಿಕೆ ಪಡೆದುಕೊಳ್ಳಬೇಕು ಎಂದ ಅವರು, ವೈದ್ಯರ ಸಮಯ ಅಮೂಲ್ಯವಾದುದು. ರೋಗಿಗಳ ಬದುಕಿಗೆ ದೇವರಾಗಿ ಬರುವ ಅವರಿಗೆ ಕೃತಜ್ಞತೆ ಸಲ್ಲಿಸುವುದು ಸಮಾಜದ ಕರ್ತವ್ಯ ಎಂದರು.

ತಾ.ಪಂ ಅಧ್ಯಕ್ಷೆ ಚಂದ್ರಕಲಾ ಭಟ್ಟ, ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ, ಬಿಜೆಪಿ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕಾರ, ಪ್ರಧಾನ ಕಾರ್ಯದರ್ಶಿ ಡಾ.ರವಿ ಭಟ್ಟ ಬರಗದ್ದೆ, ಪ್ರಮುಖರಾದ ರವಿ ಕೈಟ್ಕರ್, ವಿಜಯ ಮಿರಾಶಿ, ಸಂಘಟಕರಾದ ಮನೋಜ ನಾಯಕ, ಅಲೋಕ ನಾಯಕ, ಅಮೋಘ ನಾಯಕ, ಆಕಾಶ ನಾಯ್ಕ, ಗಣೇಶ ನಾಯ್ಕ, ನಿಖಿಲ್ ನಾಯ್ಕ, ದೇವಪ್ರಸಾದ ನಾಯ್ಕ, ಸಂದೀಪ ಹೆಬಸೂರ, ಮಹೇಂದ್ರ ಗಾವಡೆ ಇತರರಿದ್ದರು. 180 ಕ್ಕೂ ಅಧಿಕ ಜನರಿಗೆ ನೇತ್ರ, ಕಿವಿ, ಮೂಗು, ಗಂಟಲು ತಪಾಸಣೆ, ರಕ್ತ ಗುಂಪು ಪರೀಕ್ಷೆ, ಮಧುಮೇಹ ಮುಂತಾದ ತಪಾಸಣೆಗಳನ್ನು ತಾಲೂಕು ಆಸ್ಪತ್ರೆಯ ವೈದ್ಯರು ನಡೆಸಿದರು.