ಜಿಲ್ಲೆ

ಕರೆಂಟ್ ಬಿಲ್ ಕಟ್ಟಿಲ್ಲ ಎಂದು ಕರೆ ಬಂದ್ರೆ ಹುಶಾರು!!

ಕಾರವಾರ: ಸೈಬರ್ ವಂಚಕರು ದಿನದಿಂದ ದಿನಕ್ಕೆ ಹೊಸ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ಈಗ ವಿದ್ಯುತ್ ಇಲಾಖೆ ಅಧಿಕಾರಿಗಳ ಹೆಸರಿನಲ್ಲಿ ಗ್ರಾಹಕರನ್ನು ವಂಚಿಸಲಾರಂಭಿಸಿದ್ದಾರೆ.
ಕಾರವಾರದ ಸರ್ಕಾರಿ ಮೆಡಿಕಲ್ ಕಾಲೇಜ್ ನ ವೈದ್ಯ ಹಾಗೂ ಉದ್ಯಮಿಯೊಬ್ಬರಿಗೆ ವಿದ್ಯುತ್ ಇಲಾಖೆ ಅಧಿಕಾರಿಗಳ ಹೆಸರಲ್ಲಿ ವಾಟ್ಸ್ ಆ್ಯಪ್ ಸಂದೇಶ ಕಳಿಸಿದ ವಂಚಕರು, 'ನಿಮ್ಮ ವಿದ್ಯುತ್ ಬಿಲ್ ಪಾವತಿಸಿಲ್ಲ. ರಾತ್ರಿ 9.30 ರ ಒಳಗೆ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಮಾಹಿತಿಗಾಗಿ ಇಲೆಕ್ಟ್ರಿಸಿಟಿ ಅಧಿಕಾರಿಯನ್ನು ಸಂಪರ್ಕಿಸಿ ಎಂದು -9883173438 /9088392548 ಸಂಖ್ಯೆ ನೀಡಿದ್ದಾರೆ. ಮಾತ್ರವಲ್ಲ ಕರೆ ಮಾಡಿ, ಮನೆಯ ವಿದ್ಯುತ್ ಸಂಪರ್ಕ ತಕ್ಷಣ ಕಡಿತ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಅನುಮಾನಗೊಂಡ ಗ್ರಾಹಕರು ಹೆಸ್ಕಾಂ ಕಚೇರಿಯನ್ನು ಸಂಪರ್ಕಿಸಿದಾಗ ವಂಚನೆಯ ಜಾಲ ಎಂಬುದು ಬಹಿರಂಗವಾಗಿದೆ.
'ಬಿಲ್ ಕಟ್ಟದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡುವುದಾಗಿ ಹೆಸ್ಕಾಂನಿಂದ ಯಾವುದೇ ಸಂದೇಶ ಕಳಿಸುತ್ತಿಲ್ಲ. ಗ್ರಾಹಕರು‌ ಇಂಥ ಸಂದೇಶ ನಂಬಿ ಯಾವುದೇ ಸಂಖ್ಯೆಗಳಿಗೆ ಹಣ ಹಾಕಿ ಮೋಸ ಹೋಗಬಾರದು" ಎಂದು ಕಾರವಾರ ಹೆಸ್ಕಾಂ ಎಇಇ ವೀರೇಶ ಶೇಬಣ್ಣವರ್ ಎಚ್ಚರಿಸಿದ್ದಾರೆ.‌