ಚಿತ್ರದುರ್ಗ: ಜಗತ್ತನ್ನು ನಾವಿಂದು ಕರುಣೆ ಎಂಬ ಕನ್ನಡಕವನ್ನು ಧರಿಸಿ ನೋಡಬೇಕಿದೆ ಎಂದು ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ನಿತ್ಯಕಲ್ಯಾಣ ಮನೆ,ಮನೆಗೆ ಚಿಂತನ ಕಾರ‌್ಯಕ್ರಮದಲ್ಲಿ‘ಕಾರು ಣ್ಯದೃಷ್ಟಿ’ಕುರಿತು ಮಾತನಾಡಿದ ಶ್ರೀಗಳು,ಮಾನವನಿಂದು ಮಾನವೀಯತೆ ಮರೆತು ದಾನವನಾಗುತ್ತಿದ್ದಾನೆ. ಹಣವಂತರಾಗುವುದಕ್ಕಿಂತ ಗುಣವಂತರಾಗ ಬೇಕಿದೆ. ಸ್ವಾರ್ಥದಿಂದಾಗಿ ಮಾನವೀಯತೆ ಎಂಬುದು ಮರೆಯಾಗುತ್ತಿದೆ. ಕರುಣಾಮಯಿಗಳ ಹೃದಯದಲ್ಲಿ ದೇವ ರು ನೆಲೆಸಿರುತ್ತಾನೆ. ನಾವು ಮಾತೃ ಹೃದಯಿಗಳಾಗಬೇಕು. ಕ್ರೌರ‌್ಯ ಜಗತ್ತಿನ ನಾಶಕ್ಕೆ ಕಾರಣವಾಗಬಹುದು ಎಂದರು.
ಪ್ರಾಧ್ಯಾಪಕ ಡಾ.ಜಿ.ವಿ.ರಾಜಣ್ಣ ಮಾತನಾಡಿ,ದೃಷ್ಟಿ ಅಂದರೆ ಒಳಗಣ್ಣು. ಕಾರುಣ್ಯವೆಂದರೆ ಪ್ರೀತಿ,ಮಮಕಾರ.ಅದೊಂದು ಭಕ್ತಿ. ಆಧುನಿಕ ಕಾಲದ ಈ ಸಂದರ್ಭದಲ್ಲಿ ಕಾರುಣ್ಯ ದೃಷ್ಟಿಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ವಚನಕಾರರು ಕಾರುಣ್ಯದೃಷ್ಟಿಗೆ ವಿಸೃತ್ತ ರೂಪ ನೀಡಿದರು. ಆದ್ದರಿಂದಲೇ ಬಸವಣ್ಣನವರನ್ನು ಕಾರುಣ್ಯದ ಮೂರ್ತಿ ಎಂದು ಕರೆಯುತ್ತೇವೆ ಎಂದರು.
ಚಂದ್ರಹಾಸ ಹುಬ್ಬಳ್ಳಿ,ಆರ್.ಶೇಷಣ್ಣಕುಮಾರ್,ಜಯಲಕ್ಷ್ಮೀ,ವಕೀಲ ಎನ್.ಬಿ.ವಿಶ್ವನಾಥ್, ಶ್ರೀಬೃಹನ್ಮಠ ಸಂ.ಪ.ಪೂ.ಕಾಲೇಜು ಪ್ರಾ ಚಾರ್ಯ ಎಸ್.ಷಡಾಕ್ಷರಯ್ಯ,ಕಾರ‌್ಯಕ್ರಮ ಆಯೋಜಕ ಕೆ.ಎಂ.ವೀರೇಶ್ ಮಾತನಾಡಿದರು. ಗಾನಯೋಗಿ ಸಂಗೀತ ಬಳಗದ ಕಲಾವಿದ ರು ಸಂಗೀತ ಕಾರ‌್ಯಕ್ರಮವನ್ನು ನಡೆಸಿಕೊಟ್ಟರು. ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು. ಶಿವಕುಮಾರ್ ಸ್ವಾಗತಿಸಿ,ಪದ್ಮಶ್ರೀ ನಿರೂಪಿಸಿದರು.
(ಸಿಟಿಡಿ 25 ಮುರುಘಾ)
ಚಿತ್ರದುರ್ಗ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ಮನೆ,ಮನೆಗೆ ಚಿಂತನೆ ಕಾರ‌್ಯಕ್ರಮದಲ್ಲಿ ಶ್ರೀ ಬಸವಪ್ರಭು ಸ್ವಾ ಮೀಜಿ ಮಾತನಾಡಿದರು. ಡಾ.ಜಿ.ವಿ.ರಾಜಣ್ಣ,ಚಂದ್ರಹಾಸ ಹುಬ್ಬಳ್ಳಿ,ಆರ್.ಶೇಷಣ್ಣಕುಮಾರ್,ಜಯಲಕ್ಷ್ಮೀ,ಎನ್.ಬಿ.ವಿಶ್ವನಾಥ್,ಎಸ್. ಷಡಾಕ್ಷರಯ್ಯ,ಕೆ.ಎಂ.ವೀರೇಶ್ ಮತ್ತಿತರರು ಇದ್ದರು.