ಜಿಲ್ಲೆ

ಕರಿಯಮ್ಮ ದೇವಿ ದೇಗುಲ ಲೋಕಾರ್ಪಣೆ

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದ ಶಕ್ತಿದೇವತೆ ಕರಿಯಮ್ಮ ದೇವಿಯ ನೂತನ ದೇಗುಲದಲ್ಲಿ ಮೂರು ದಿನ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

12ರಂದು ನಸುಕಿನ 3 ಗಂಟೆಗೆ ಗಂಗಾಪೂಜೆ, ರಾತ್ರಿ ದುರ್ಗಿ ಹೋಮ ಹಾಗೂ ಚಂಡಿಹೋಮ ಎಂ.ಡಿ.ಚಂದ್ರಶೇಖರಯ್ಯ ಶಾಸ್ತ್ರೀ ಅವರ ತಂಡದಿಂದ ನೆರವೇರಲಿದೆ.

13ರಂದು ಬ್ರಾಹ್ಮೀ ಮುಹೂರ್ತದಲ್ಲಿ ಬೆಳಗ್ಗೆ 5.20ರಿಂದ 7.30ರೊಳಗೆ ಕರಿಯಮ್ಮ ದೇವಿಯ ನೂತನ ದೇಗುಲ ಪ್ರಾರಂಭೋತ್ಸವ, ವಿಗ್ರಹ ಪ್ರತಿಷ್ಠಾಪನೆ ಹಾಗೂ ಮಧ್ಯಾಹ್ನ 12.20ಕ್ಕೆ ಗೋಪುರ ಕಳಸಾರೋಹಣ ಲೋಕಾರ್ಪಣೆ ಜರುಗಲಿದೆ. 1ಕ್ಕೆ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ.

14ರಂದು ಕರಿಯಮ್ಮ ದೇವಿ, ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗಳ ಹೂವಿನ ಪಲ್ಲಕ್ಕಿ ಉತ್ಸವ ರಾಜಬೀದಿಗಳಲ್ಲಿ ಸಂಚರಿಸಲಿದೆ. ಚಿಕ್ಕಮಗಳೂರಿನ ಮಹಿಳಾ ವೀರಗಾಸೆ ಕಲಾ ತಂಡದಿಂದ ವೀರಗಾಸೆ ಪ್ರದರ್ಶನವಾಗಲಿದೆ ಎಂದು ಕರಿಯಮ್ಮ ದೇವಿ ಜೀಣೋದ್ಧಾರ ಸೇವಾ ಸಮಿತಿ, ಗ್ರಾಮಸ್ಥರು ತಿಳಿಸಿದ್ದಾರೆ.