ಕಲಬುರಗಿ: ದಕ್ಷಿಣ ಕನ್ನಡ ಸಂಘದಿAದ ೫೯ನೇ ಶ್ರೀ ಗಣೇಶೋತ್ಸವ ನಿಮಿತ್ತ ಕರಾವಳಿ ಪ್ರೀಮಿಯರ್ ಲೀಗ್(ಕೆಪಿಎಲ್-೨೦೨೪) ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಸಂಘದ ಅಧ್ಯP್ಷÀ ಚಂದ್ರಶೇಖರ ಶೆಟ್ಟಿ ತಿಳಿಸಿದರು.
ಆ.೨೫ರಂದು ಬೆಳಗ್ಗೆ ೭ಕ್ಕೆ ನಗರದ ಎನ್.ವಿ.ಮೈದಾನದಲ್ಲಿ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಹೋಟೆಲ್ ಉದ್ಯಮಿ ವಿಷ್ಣು ಮೂರ್ತಿ ಚಾತ್ರ ಉದ್ಘಾಟಿಸಲಿದ್ದು, Áದರ್ ವಿನ್ಸೆಂಟ್ ಪೇರೆರ್ ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜೀವನ ರಾಡ್ರಿಗಸ್ ತಂಡದ ಮಾಲೀಕತ್ವದ, ಯತೀಶ ನಾಯಕತ್ವದ ಕುಡ್ಲಾ ಚಾಲೆಂರ‍್ಸ್ ತಂಡ, ಸುದರ್ಶನ ಜತ್ತನ ಮಾಲಿಕತ್ವದ, ಜೀವನ ಜತ್ತನ್ ನಾಯಕತ್ವದ ಉಡುಪಿ ಸೂಪರ್ ಕಿಂಗ್ಸ್, ಸಂತೋಷ ಪೂಜಾರಿ ಮಾಲಿಕತ್ವದ, ರಾಘವೇಂದ್ರ ಸಾಲಿಯಾನ್ ನಾಯಕರಾದ ಕುಂದಾಪುರ ವಾರಿರ‍್ಸ್, ಸಾತ್ವಿಕ್ ಶೆಟ್ಟಿ ಮಾಲಿಕತ್ವ, ಸತ್ಯಾನಂದ ನಾಯಕತ್ವದ ಕಲಬುರಗಿ ಟೈಟನ್ಸ್ ತಂಡಗಳು ಲೀಗ್‌ನಲ್ಲಿ ಪಾಲ್ಗೊಳ್ಳಲಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೀಗ್ ಪಂದ್ಯಗಳು ೬ ಓವರ್‌ನದ್ದಾಗಿದ್ದು, ಸೆಮಿಫೈನಲ್, ÉÊನಲ್ ಪಂದ್ಯಗಳು ೧೦ ಓವರ್‌ನದ್ದಾಗಿವೆ. ಗೆದ್ದ ತಂಡಕ್ಕೆ ಟ್ರೋಫಿ ನೀಡಲಾಗುವುದು. ಸಂಘದಿAದ ನಿರಂತರವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ. ಸೆ.೧ರಂದು ದಕ್ಷಿಣ ಕನ್ನಡ ಕ್ರೀಡೋತ್ಸವ ಏರ್ಪಡಿಸಲಾಗುತ್ತಿದೆ. ಸೆ.೭ರಂದು ನಗರದ ಯಾತ್ರಿ ನಿವಾಸದಲ್ಲಿ ಗಣೇಶೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗೌರವ ಅಧ್ಯP್ಷÀ ಪ್ರಶಾಂತ್ ಶೆಟ್ಟಿ, ಕಾರ್ಯದರ್ಶಿ ಪುರಂದರ ಭಟï, ಕ್ರೀಡಾ ವಿಭಾಗದ ಮಹಾಕೀರ್ತಿ ಶೆಟ್ಟಿ, ಜಂಟಿ ಕಾರ್ಯದರ್ಶಿ ಸುನೀಲ್ ಶೆಟ್ಟಿ ಇತರರಿದ್ದರು.