ಧಾರವಾಡ: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ನಗರದ ಪ್ರಿಸಮ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿದ್ದಾರೆ.
ಅರ್ಫತ್ ನದಾಫ (82ಕೆಜಿ ವಿಭಾಗದಲ್ಲಿ)ಪ್ರಥಮ, ಮನೋಜ ಕಂಬಾರ (84ಕೆಜಿ) ತೃತೀಯ, ಕಾರ್ತಿಕ ಇಟಗಿಮಠ (56 ಕೆಜಿ) ತೃತೀಯ, ದೇವರಾಜ ಮಣ್ಣಿಕೇರಿ (52ಕೆಜಿ) ತೃತೀಯ, ವಾಣಿ ಪತ್ತಾರ (54 ಕೆಜಿ) ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.
ಅರ್ಫತ್ ನದಾಫ ಹಾಗೂ ಮನೋಜ ಕುಂಬಾರ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ನಿರ್ದೇಶಕ ಶ್ರೀನಿವಾಸ ತಿಮ್ಮನಗೌಡರ, ಕಾರ್ಯದರ್ಶಿ ವೀಣಾ ತಿಮ್ಮನಗೌಡರ, ಪ್ರಾಂಶುಪಾಲ ಎಸ್.ಎಂ. ಹುಲ್ಲೂರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.