ಬಾಗಲಕೋಟೆ: ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಸೆ.10 ಮತ್ತು 11 ರಂದು ನಡೆದ ಎರಡು ದಿನಗಳ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಫ್ ನಲ್ಲಿ ಬಾಗಲಕೋಟೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಜೂನಿಯರ್, ಸಬ್ ಜೂನಿಯರ್, ಕೆಡೆಟ್ ಹಾಗೂ ಸಿನಿಯರ್ ವಿಭಾಗಗಳಲ್ಲಿ ಒಟ್ಟು 39 ವಿದ್ಯಾರ್ಥಿಗಳು ಭಾಗವಹಿಸಿದ್ದು 16 ಜಿಲ್ಲೆಗಳಿಂದ ಅಂದಾಜು 800 ಕ್ಕೂ ಹೆಚ್ಚು ಕರಾಟೆ ಪಟುಗಳು ಪಾಲ್ಗೊಂಡಿದ್ದರು. ಜಿಲ್ಲೆಯ ಕ್ರೀಡಾಪಟುಗಳು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಸ್ಪರ್ಧೆ ಮಾಡಿ 25 ಚಿನ್ನದ ಪದಕ, 21 ಬೆಳ್ಳಿ ಪದಕ ಹಾಗೂ 25 ಕಂಚು ಒಟ್ಟು 71 ಪದಕಗಳನ್ನು ಪಡೆದುಕೊಂಡಿದ್ದಾರೆ.
ಚಿನ್ನದ ಪದಕ ಪಡೆದ ಕ್ರೀಡಾಪಟುಗಳು : ಪ್ರಭುಸ್ವಾಮಿ ಆರಾಧ್ಯಮಠ, ಹುಲ್ಲಪ್ಪ ಕಪನೂರ, ಲಕ್ಷ್ಮೀ ಕಂಬಾರ, ರುಕ್ಸಾರ, ನಿಖಿಲ್ ಅಂಬಿಗೇರ, ಮನ್ಹಾರ್ ಭಾಟಿ, ಅಚ್ಯುತ್ ಸತ್ನಾಯಕ್, ಸಾಕ್ಷೀ ಹಳ್ಳಿ, ತೇಜಸ್ ಹಳ್ಳಿ, ವೈಭವ ಕೆಲೂಡಿ, ಉಮಿಕಾ ಭಾಟಿ, ಕೌಶಿಕ ಹಾದಿಮನಿ, ಅನನ್ಯ ಕುಲಕರ್ಣಿ, ಅನ್ನಪೂರ್ಣೇಶ್ವರಿ ಆರಾಧ್ಯಮಠ, ಸಮರ್ಥ ದಳವಾಯಿ, ಕಾವ್ಯಾ ಅಡಿನ, ಕಾರ್ತಿಕ್ ಹಿರೇಮಠ, ಅನಿರುದ್ಧ ಪೇಟಕರ್, ಅರುಣ ವಾಲಿಕಾರ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಬೆಳ್ಳಿ ಪದಕ ಪಡೆದ ಕ್ರೀಡಾಪಟುಗಳು : ಅಮೋಘ ಕುಲಕರ್ಣಿ, ವೈಷ್ಣವಿ ಅಂಗಡಿ, ಅರುಣ ಧನ್ನೂರ, ಪ್ರೀತಮ್ ಚಲವಾದಿ, ರೋಹಿತ್ ಜಗಲಿ, ಮಾನಸ್ವಿ ಭಾಟಿ, ಸಂಜನಾ ಸಾಲಿಮಠ, ಆದರ್ಶ ಹಿರೇಮಠ, ಅಪ್ಪಾಜಿ ಕಟ್ಟಿಮನಿ, ನಿಸರ್ಗ ನಾಯ್ಕ, ಯಾಸಿನ್ ಕೌಜಲಗಿ, ಜಭಿಯಾ ಸಹಾರ, ರಜತ ಹದ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಕಂಚು ಪದಕ ಪಡೆದ ಕ್ರೀಡಾಪಟುಗಳು : ಸಿಂಚನಾ ಮಾಳಾಶಂಕರ, ಪ್ರದೀಪ ಜಗಲಿ, ಪೃಥ್ವಿರಾಜ ಪೂಜಾರಿ, ಕಾರ್ತಿಕ ಚಲವಾದಿ, ಸಾಯಿಪ್ರಸಾದ ಪೂಜಾರಿ, ಶಶಾಂಕ ತೆಗ್ಗಿ, ಶಾಮ್ ಕೊಪ್ಪದ ಕಂಚಿನ ಪದಕ ಮುಡಿಗೇರಿಸಿಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.