ಜಿಲ್ಲೆ

ಕರಾಟೆ ಪಟುಗಳ ಜ್ಯೋತಿ ಮೆರವಣಿಗೆ 14ರಂದು

ಜಯತೀರ್ಥ ಪಾಟೀಲ

ಕಲಬುರಗಿ: ಬುಡೋಕೈ ಶಿಟೊರಿಯೋ ಕರಾಟೆ ಫೆಡರೇಷನ್ ಆಫ್ ಇಂಡಿಯಾದ ವಿದ್ಯಾರ್ಥಿಗಳು ಹಾಗೂ ಅವರಾದ್‌ನ ಸ್ಟುಡೆಂಟ್ ಪೊಲೀಸ್ ಕೆಡೆಟ್ ವಿದ್ಯಾರ್ಥಿನಿಯರು, ನಗರದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ಏ.೧೪ರಂದು ಬೆಳಗ್ಗೆ ೬.೩೦ಕ್ಕೆ ಕರಾಟೆ ಪಟುಗಳ ಜ್ಯೋತಿ ಮೆರವಣಿಗೆ ನಡೆಯಲಿದೆ. ನಗರದ ಕೇಂದ್ರ ಬಸ್ ನಿಲ್ದಾಣದಿಂದ ಜಗತ್ ವೃತ್ತದವರೆಗೆ ನಡೆಯಲಿದೆ. ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಚಾಲನೆ ನೀಡಲಿದ್ದಾರೆ. ಧರ್ಮಣ್ಣ ಜೈನಾಪುರ, ಸಂಜೀವಕುಮಾರ ಜೋಗ, ವಿನೋದ ಕಾಂಬಳೆ ಸೇರಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.