ಯಾದಗಿರಿ: ನಗರದ ಕನರ್ಾಟಕ ರಕ್ಷಣಾ ವೇದಿಕೆ ಕಾಯರ್ಾಲಯದಲ್ಲಿ ಜಿಲ್ಲಾ ಪಧಾದಿಕಾರಿಗಳ ಜಿಲ್ಲೆಯ ಆರು ತಾಲೂಕಿನ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದಶರ್ಿಗಳ ಮತ್ತು ಯುವ ಘಟಕ ಅಧ್ಯಕ್ಷ, ಪ್ರಧಾನ ಕಾರ್ಯದಶರ್ಿಗಳ ಮಾಸಿಕ ಸಭೆಯನ್ನು ನಡೆಸಲಾಯಿತು.
ಸಭೆಯ ಅಧ್ಯಕ್ಷತೆವಹಿಸಿದ ಜಿಲ್ಲಾಧ್ಯಕ್ಷರಾದ ಟಿ.ಎನ್.ಭೀಮುನಾಯಕರವರ ಸಭೆಯನ್ನು ಉದ್ದೆಶಿಸಿ ಮಾತನಾಡಿ
ಯಾದಗಿರಿ ಜಿಲ್ಲೆಯಲ್ಲಿ ಬರುವ ತಾಲೂಕುಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕರವೇ ತಾಲೂಕು ಕೇಂದ್ರಗಳು ಅತಿಹೆಚ್ಚಾಗಿ ಭಲಿಷ್ಟವಾಗಬೇಕಿದೆ, ಆಯಾ ತಾಲೂಕಿನ ಅಧ್ಯಕ್ಷರ ಜೊತೆ ಸ್ಪಂದಿಸದ ಪಧಾದಿಕಾರಿಗಳಿಗೆ ಮುಲಾಜಿಲ್ಲದೆ ಕಿತ್ತೇಸೆದು ಕನ್ನಡ ನಾಡು ನುಡಿಗಳ ಬಗ್ಗೆ ಗೌರವ, ಅಭಿಮಾನ ಹೊಂದಿರುವಂತಹ ಸ್ವಾಭಿಮಾನಿಗಳನ್ನು ಸೇರಿಸೊಳ್ಳುವಂತೆ ಸೂಚಿಸಿದರು,
ಬರುವ ದಿನಗಳಲ್ಲಿ ಪ್ರತಿ ತಾಲೂಕಿನಲ್ಲಿ ಮೂರು ತಿಂಗಳಿಗೊಮ್ಮೆ ಸಭೆಯನ್ನು ಕಡ್ಡಾಯವಾಗಿ ಆಯೋಜಿಸಬೇಕೆಂದು ಹೇಳಿದರು ನಿಮ್ಮ ತಾಲೂಕಿನಲ್ಲಿ ಕುಂದು ಕೊರೆತೆಗಳ, ರೈತರ ಹಲವು ಸಮಸ್ಯಗಳ ಬಗ್ಗೆ ತಿಳಿಯಲು ಮತ್ತು ಅದನ್ನು ಯಾವರೀತಿ ಬಗೆಹರಿಸಬೇಕೆಂದು ತಿಮರ್ಾನಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಅತೀ ಹಿಂದೂಳಿದ ತಾಲೂಕುಗಳೆಂದರೆ ವಡಿಗೇರಾ ಹಾಗೂ ಗುರುಮಿಠಕಲ್ ತಾಲೂಕುಗಳಲ್ಲಿ ಇನ್ನು ತಲಾ ಶೇ.60%ರಷ್ಟು ಸಕರ್ಾರಿ ಕಛೇರಿಗಳು ಆರಂಭವಾಗಬೇಕಿದ್ದು ಕೂಡಲೇ ತಾಲೂಕು ಮಟ್ಟದ ಸಕರ್ಾರಿ ಕಛೇರಿಗಳನ್ನು ಆರಂಭಿಸಲು ರಾಜ್ಯ ಸಕರ್ಾರಕ್ಕೆ ಆಗ್ರಹಿಸಿ ಇನ್ನೂ ಕೇಲವೆ ದಿನಗಳಲ್ಲಿ ಬೃಹತ್ ಮಟ್ಟದ ಹೋರಾಟವನ್ನು ಹಮ್ಮಿಕೋಳ್ಳಬೇಕಾಗಿದೆ ಆದಕಾರಣ ಇವೆರಡು ತಾಲೂಕಿನ ಅಧ್ಯಕ್ಷರು ಪಧಾಧಿಕಾರಿಗಳನ್ನು ಹಾಗೂ ಗ್ರಾಮ ಘಟಕ ಸ್ಥಾಪನೆ ಮಾಡುವುದರಲ್ಲಿ ಅತೀಹೆಚ್ಚು ಕಾಲವಕಶ ನೀಡಬೆಕೆಂದರು.