ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಕುಂಚಿಟಿಗ ಮಠದಲ್ಲಿ ಕಳೆದ ಆರು ತಿಂಗಳಿನಿಂದಲೂ ಆಗಿಂದಾಗ್ಗೆ ಕರಡಿ ಕಾಣಿಸಿಕೊಳ್ಳುತ್ತಿದ್ದು, ಭಕ್ತರು ಹಾಗೂ ಮಠಕ್ಕೆ ಬಂದು ಹೋಗುವವರಲ್ಲಿ ಆತಂಕ ಉಂಟಾಗುತ್ತಿದೆ. ಕೂಡಲೇ ಕರಡಿಯನ್ನು ಹಿಡಿದು ಅರಣ್ಯ ಅಥವಾ ಮೃಗಾಲಯಕ್ಕೆ ಸಾಗಿಸುವಂತೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರು.
ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್, ರಾಜಣ್ಣ, ಗೋಪಿನಾಥ್, ಪ್ರದೀಪ್ ಇತರರಿದ್ದರು.