ಬಳ್ಳಾರಿ : ಸಂಡೂರು ತಾಲೂಕಿನ ಉಬ್ಬಳಗಂಡಿ ಗ್ರಾಮದ ಬೆಟ್ಟದ ಪ್ರದೇಶದಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಅತಂಕ ಮೂಡಿಸಿದೆ. ಗ್ರಾಮದಳೊಗೆ ಕರಡಿ ಪ್ರವೇಶಿಸದಂತೆ ಗ್ರಾಮಸ್ಥರು ಸೇರಿ ಓಡಿಸಿದ್ದಾರೆ. ಬೆಟ್ಟದ ಪ್ರದೇಶದಲ್ಲಿ ಕಂಡ ಕರಡಿಯಿಂದ ಸುತ್ತಲಿನ ಜಮೀನು ಹಾಗೂ ಇತರೆ ಉದ್ದೇಶಗಳಿಗೆ ತೆರಳಲು ಗ್ರಾಮಸ್ಥರು ಭಯಬೀತರಾಗಿದ್ದಾರೆ. ಈ ಹಿನ್ನಲೆ ಅಹಿತಕರ ಘಟನೆ ನಡೆಯುವ ಮುನ್ನವೇ ಕರಡಿಯನ್ನು ಹಿಡಿದು ಕಾಡಿಗೆ ಸ್ಥಳಾಂತರಿಸಬೇಕು ಎಂದು ಅರಣ್ಯ ಇಲಾಖೆಗೆ ಗ್ರಾಮದ ಜನರು ಮನವಿ ಮಾಡಿದ್ದಾರೆ.