ಜಿಲ್ಲೆ

ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ರೈತ

ಕೊಪ್ಪಳ: ತಾಲೂಕಿನ ಬೂದಗುಂಪಾ ಗ್ರಾಮದ ಜಮೀನಿನಲ್ಲಿ ಕರಡಿ ದಾಲಿಯಿಂದ ತಪ್ಪಿಸಿಕೊಳ್ಳಲು ಹೋಗಿ ಆಯತಪ್ಪಿ ಬಿದ್ದು ರೈತನೋರ್ವ ಪ್ರಾಣ ಕಳೆದುಕೊಂಡಿದ್ದಾನೆ.

ಬೂದಗುಂಪಾ ಗ್ರಾಮದ ಹನುಮಂತ ಕಡಿಗೆಟ್ಟಿ(50) ಮೃತ ರೈತ. ನಿನ್ನೆ ರಾತ್ರಿ 10 ಗಂಟೆಗೆ ಹೊಲಕ್ಕೆ ತೆರಳಿದಾಗ ಕರಡಿ ದಾಳಿ ಮಾಡಲು ಮುಂದಾಗಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವಾಗ ಕತ್ತಲಲ್ಲಿ ಆಯತಪ್ಪಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.


ಮೃತನಿಗೆ ಇಬ್ಬರು ಮಕ್ಕಳಿದ್ದಾರೆ. ವಿಷಯ ತಿಳಿದು ಅರಣ್ಯ ಅಧಿಕಾರಿಗಳು ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊದಲ್ಲಿ ಮೆಕ್ಕೆಜೋಳ ಬೇಳೆದಿದ್ದು, ರೈತ ಹಾಗೂ ಕರಡಿ ಓಡಾಡಿ ಸ್ವಲ್ಪ ಬೆಳೆಯೂ ಹಾಳಾಗಿದೆ. ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಸ್ಥಳಕ್ಕೆ ತೆರಳಿ ಸಮಸ್ಯೆ ಆಲಿಸಿದರು.


ಇರಕಲ್ ಗಡಾ ಭಾಗದಲ್ಲಿ ಕರಡಿ ದಾಳಿ ಹೆಚ್ಚುತ್ತಿದ್ದು, ಎರಡು ದಿನಗಳ ಹಿಂದೆ ಇಂದರಗಿ ಗ್ರಾಮದಲ್ಲಿ ರೈತನ ಮೇಲೆ ಕರಡಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತ್ತು. ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕರಡಿಧಾಮ ಮಾಡುವಂತೆ ಸಾರ್ವಜನಿಕರ ಒತ್ತಾಯವಿದೆ. ಯುವ ಮುಖಂಡ ಮಹಾಂತೇಶ ಸಂಗಟಿ ಇತರರು ಇದ್ದರು.