ಕರಕನಳ್ಳಿಯ ಶ್ರೀ ಗುರು ಬಕ್ಕಪ್ರಭು ದೇವಸ್ಥಾನದಲ್ಲಿ ಶ್ರಾವಣ ಸಮಾಪ್ತಿ ನಿಮಿತ್ತ ಸೋಮವಾರ ಭಕ್ತರು ಪ್ರಸಾದ (ಖಾಂಡ) ಸ್ವೀಕರಿಸಿದರು. 
ಜಿಲ್ಲೆ

ಕರಕನಳ್ಳಿಯಲ್ಲಿ ಶ್ರಾವಣ ಮಾಸದ ಪುರಾಣ ಮಹಾಮಂಗಲ

ಚಿಟಗುಪ್ಪ: ಕರಕನಳ್ಳಿ ಗ್ರಾಮದ ಶ್ರೀ ಗುರು ಗಂಗಾಧರ ಬಕ್ಕಪ್ರಭು ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಶ್ರಾವಣ ಸಮಾಪ್ತಿ, ಪುರಾಣ ಮಹಾಮಂಗಲ ಪ್ರಯುಕ್ತ ವಿವಿಧ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ದರ್ಶನ ಪಡೆದರು.

ದೇವಸ್ಥಾನದಲ್ಲಿ ಒಂದು ತಿಂಗಳಿನಿಂದ ನಡೆದ ಶ್ರೀ ಜಗಜ್ಯೋತಿ ಬಸವೇಶ್ವರರ ಪುರಾಣ ಮಹಾಮಂಗಲಗೊಂಡಿತು. ನಿವೃತ್ತ ಶಿಕ್ಷಕ ಶಿವಶರಣರಪ್ಪ ವರಪುಲ ಮಾತನಾಡಿ, ವೇದಮೂರ್ತಿ ಗಿರೀಶ್ ಶಾಸ್ತ್ರೀಗಳಿಂದ ಒಂದು ತಿಂಗಳ ಕಾಲ ನಡೆದ ಪುರಾಣ ಅದ್ಬುತವಾಗಿ ಮೂಡಿ ಬಂದಿದೆ ಎಂದು ಹೇಳಿದರು.

ಗವಾಯಿ ಮಲ್ಲಿಕಾರ್ಜುನ ಮರಪಳ್ಳಿ, ತಬಲಾ ವಾದಕ ವಿಶ್ವನಾಥ ಸ್ವಾಮಿ ಐನೊಳ್ಳಿ, ಬಸವಣ್ಣ ಸೋಮನಾಥ ಗಾದಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪ್ರಮುಖರಾದ ಜಗನ್ನಾಥರಡ್ಡಿ ಮಟಾಟಿ, ಬಕ್ಕಯ್ಯಸ್ವಾಮಿ, ಗೋಪಾಲರಡ್ಡಿ ನಿರ್ಣಾ, ಭೀಮಶಾ ಬುಡ್ಗಾ , ಮಲ್ಲಿಕಾರ್ಜುನ ರಡ್ಡಿ, ಲಕ್ಷ್ಮೀಕಾಂತ ಕುಲಕರ್ಣಿ, ಪಾಂಡುರಡ್ಡಿ, ಪ್ರಭು ಘಾಟೊಳ್ಳಿ, ಲಕ್ಷ್ಮೀಕಾಂತ ರಡ್ಡಿ ನಾರಾ, ಜಗನ್ನಾಥ ಗಾರಿ, ಶ್ರೀಕಾಂತರಡ್ಡಿ ಮಟಾಟಿ ಮತ್ತು ಅನೇಕ ಭಕ್ತಸಮೂಹ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಆಶೀರ್ವಾದ ಪಡೆದರು.