ಬೀದರ್: ಇಲ್ಲಿಯ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರದೀಪ್ ಕರಂಜೆ ಅವರಿಗೆ ಬೆಳಗಾವಿಯ ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿ ನೀಡಿದೆ.
ಡಾ. ರವೀಂದ್ರ ಎಕಲಾರಕರ್ ಮಾರ್ಗದರ್ಶನದಲ್ಲಿ ‘ಇಂಪ್ರುವಿಂಗ್ ಕ್ವಾಲಿಟಿ ಆಫ್ ಸರ್ವಿಸ್ ಇನ್ ಮ್ಯಾನೆಟ್ಸ್’ ಕುರಿತು ಅವರು ಮಂಡಿಸಿದ ಪ್ರೌಢ ಪ್ರಬಂಧವನ್ನು ವಿಶ್ವವಿದ್ಯಾಲಯ ಪಿ.ಎಚ್.ಡಿ. ಪದವಿಗೆ ಮಾನ್ಯ ಮಾಡಿದೆ.