ಜಿಲ್ಲೆ

ಕಮ್ಮಿ ದರದಲ್ಲಿ ಗುಣಮಟ್ಟದ ಔಷಧ

ಔರಾದ್: ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಗಳನ್ನು ಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಎಲ್ಲೆಡೆ ಜನೌಷಧ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದರು.

ತಾಲೂಕಿನ ಠಾಣಾಕುಶನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಜನೌಷಧ ಕೇಂದ್ರ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಯಲ್ಲಿ ಜನೌಷಧ ಕೇಂದ್ರ ಸ್ಥಾಪನೆ ಮುಖ್ಯವಾಗಿದೆ. ಇದರು ಕೋಟ್ಯಂತರ ಬಡಜನತೆಯ ಆಶಾಕಿರಣವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ತಾಪಂ ಅಧ್ಯಕ್ಷ ಗಿರೀಶ ವಡೆಯರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಹ ಜನೌಷಧ ಕೇಂದ್ರ ಆರಂಭಗೊಂಡಿರುವುದರಿಂದ ಈ ಭಾಗದ ಸುತ್ತಮುತ್ತಲಿನ ಹಲವಾರು ಹಳ್ಳಿಗಳ ಜನತೆಗೆ ನೆರವಾಗಲಿದೆ. ರೋಗಿಗಳು ಕಮ್ಮಿ ದರದಲ್ಲಿ ಇಲ್ಲಿ ಉತ್ತಮ ಗುಣಮಟ್ಟದ ಔಷಧ ಪಡೆಯಬೇಕೆಂದು ಕೋರಿದರು.

ಬಿಜೆಪಿ ತಾಲೂಕಾಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಡಾ. ಫೈಜಲ್, ಡಾ.ಪ್ರವೀಣ್ ಮಾಸಿಮಾಡೆ, ಡಾ. ಪ್ಲೋರಿನ್ಸಾ, ಶಿವಶರಣಪ್ಪ ವಲ್ಲೆಪುರೆ, ವೈಜಿನಾಥ ವಲ್ಲೆಪುರೆ, ರಾಜಕುಮಾರ ಸೊರಾಳೆ, ಸುರೇಶ ಭೋಸ್ಲೆ, ಪ್ರತೀಕ್ ಚವ್ಹಾಣ್, ಜಗನ್ನಾಥ ಮೂಲಗೆ, ಸುನೀಲ ಕಸ್ತೂರೆ, ಸತೀಶ ಜೀರ್ಗೆ ಇತರರಿದ್ದರು.