ಜಿಲ್ಲೆ

ಕಮಲ್ ಹಾಸನ್ ಕ್ಷಮೆ ಕೇಳಲು ಒತ್ತಾಯ

ಚಾಮರಾಜನಗರ: ಕನ್ನಡ ಭಾಷೆ ಕುರಿತು ಹಗುರವಾಗಿ ಮಾತನಾಡಿರುವ ನಟ ಕಮಲ್ ಹಾಸನ್ ಪ್ರೀತಿಯಿಂದಲೇ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಖ್ಯಾತ ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅಗ್ರಹಿಸಿದ್ದಾರೆ.

ಕನ್ನಡ ಭಾಷೆ ಕುರಿತ ನನ್ನ ಹೇಳಿಕೆಗೆ ಅದರ ಮೇಲೆ ನನಗಿರುವ ಪ್ರೀತಿಯೇ ಕಾರಣ ಎಂದು ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ಭಾರತೀಯ ಚಲನಚಿತ್ರ ರಂಗದ ಜನಪ್ರಿಯ ನಟರು. ಕನ್ನಡದ ನೆಲ, ಜಲ, ಭಾಷೆ ವಿಚಾರದಲ್ಲಿ ಯಾರೇ ಹಗುರವಾಗಿ ಮಾತನಾಡುವುದನ್ನು ಕನ್ನಡಿಗರು ಎಂದೂ ಸಹಿಸಿಕೊಳ್ಳುವುದಿಲ್ಲ. ಈ ಕೂಡಲೇ ಕನ್ನಡಿಗರ ಬಳಿ ಕ್ಷಮೆಯಾಚಿಸುವ ಜತೆಗೆ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.