ಸೊರಬ: ಚಂದ್ರಗುತ್ತಿ ಸಮೀಪದ ಕಮಲಾಪುರ ಗ್ರಾಮದ ಸರ್ಕಲ್‌ಗೆ ಗ್ರಾಮಸ್ಥರು ಶಿವಾಜಿ ಸರ್ಕಲ್ ಎಂದು ಶುಕ್ರವಾರ ನಾಮಕರಣ ಮಾಡಿದರು.
ಕಾರ್ಯಕ್ರಮದಲ್ಲಿ ಮುಖಂಡ ಮಂಜುನಾಥ್ ಮಾತನಾಡಿ, ಹಿಂದು ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನ ವೃತ್ತವನ್ನು ಮಾಡಬೇಕೆಂದು ಸಂಕಲ್ಪ ಹೊಂದಿ ಕಮಲಾಪುರ ಗ್ರಾಮಸ್ಥರು ಮತ್ತು ಯುವಕರೆಲ್ಲ ಒಗ್ಗೂಡಿ ಈ ದಿನ ಆಸೆಯನ್ನು ಈಡೇರಿಸಿದ್ದೇವೆ. ಮುಂದಿನ ದಿನಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ನೆರವೇರಿಸುತ್ತೇವೆ ಹಾಗೂ ಶಿವಾಜಿ ಮಹಾರಾಜರ ಜೀವನದ ತತ್ವ, ಆದರ್ಶವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಪ್ರಮುಖರಾದ ಗೋಪಿ, ದತ್ತು, ಶಿವಣ್ಣ, ಮುರಳಿ, ರಾಮಣ್ಣ ಗದ್ದೆಮನೆ, ಎಂ.ಕೆ.ಸಚಿನ್, ಶೇಖರ್, ಚೇತನ್, ಶ್ರವಣ, ಮಧುಕರ್, ಪ್ರಕಾಶ್, ಗಿರೀಶ್ ಶೇಟ್, ಪ್ರಕಾಶ್, ಉಮೇಶ, ದಯಾನಂದ ಇತರರಿದ್ದರು.