ಜಿಲ್ಲೆ

ಕಮಲಾಪುರ; ಅನಧಿಕೃತ ಲೋಡ್ ಶೆಡ್ಡಿಂಗ್​ಗೆ ಆಕ್ರೋಶ

ಕಮಲಾಪುರ: ತಾಲೂಕಿನ ವ್ಯಾಪ್ತಿಯಲ್ಲಿ ಜೆಸ್ಕಾಂನಿಂದ ಅನಧಿಕೃತ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರಣಬಸ್ಸಪ್ಪ ಪಾಟೀಲ್ ದೂರಿದ್ದಾರೆ.

ಕಳೆದ ಎರಡು ವಾರಗಳಿಂದ ಯಾವುದೇ ಮೂನ್ಸೂಚನೆ ನೀಡದೆ ಬೇಕಾ ಬಿಟ್ಟಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗುತ್ತಿದೆ. ಮೊದಲೆ ಮಳೆಯಾಗುತ್ತಿಲ್ಲ. ಹೀಗಿರುವಾಗ ವಿದ್ಯುತ್​ ಇಲ್ಲದಿದ್ದರೆ ಬೆಳೆಗಳ ಸ್ಥಿತಿ ಏನು ? ಸಸಿಗಳು ಒಣಗಿ ಹೋಗುತ್ತಿವೆ, ಮೋಟಾರುಗಳು ಸುಡುತ್ತಿವೆ ಎಂದು ಕಿಡಿಕಾರಿದರು.

ಪ್ರತಿ ಬಾರಿ ಕಮಲಾಪುರ ತಾಲೂಕವನ್ನು ಬರ ಪೀಡಿತ ಪ್ರದೇಶದಿಂದ ಕೈ ಬಿಡಲಾಗುತ್ತಿದೆ, ನಮ್ಮಲ್ಲಿ ಭೀಕರ ಬರದ ಛಾಯೆ ಆವರಿಸಿ ರೈತಾಪಿ ವರ್ಗ ಕಂಗಾಲಾಗಿದ್ದಾರೆ, ಆದರೂ ಕಮಲಾಪುರವನ್ನು ಬರ ಪೀಡಿತ ತಾಲೂಕಿನಿಂದ ಕೈ ಬಿಟ್ಟಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ. ಸರ್ಕಾರ ಇನ್ನೊಮ್ಮೆ ಪರಿಶೀಲಿಸಿ, ಪಟ್ಟಿಯಲ್ಲಿ ಕಮಲಾಪುರವನ್ನು ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.