ಚಿಕ್ಕಮಗಳೂರಿನ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಶ್ರೀ ಕಮಲವಾಹಿನಿಯಾಗಿ ದರ್ಶನ ನೀಡಿದ ಶ್ರೀ ಮಹಾಲಕ್ಷ್ಮೀ 
ಜಿಲ್ಲೆ

ಕಮಲವಾಹಿನಿಯಾಗಿ ಕಂಗೊಳಿಸಿದ ಶ್ರೀ ಮಹಾಲಕ್ಷ್ಮೀ

ಚಿಕ್ಕಮಗಳೂರು; ನಾಡಹಬ್ಬ ನವರಾತ್ರಿಯ ಕೊನೆ ದಿನವಾದ ವಿಜಯದಶಮಿಯಂದು ಕಾಫಿನಾಡಿನ ಶ್ರೀ ಅಷ್ಟಲಕ್ಷ್ಮಿ ಸಹಿತ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಕಮಲ ವಾಹಿನಿಯಾಗಿ ಶ್ರೀ ಮಹಾಲಕ್ಷ್ಮಿ ತಾಯಿ ಭಕ್ತರಿಗೆ ದರ್ಶನ ನೀಡಿದಳು.

ವಿಜಯದಶಮಿ ಹಿನ್ನೆಲೆಯಲ್ಲಿ ಭಕ್ತರು ಬೆಳಗ್ಗಿನಿಂದಲೇ ದೇವಾಲಯಕ್ಕೆ ಆಗಮಿಸಿ ತಾಯಿಯ ದರ್ಶನ ಪಡೆದು, ಪೂಜೆ ಸಲ್ಲಿಸಿ ಪುನೀತರಾದರು. ಇನ್ನು ದೇವಾಲಯದಲ್ಲಿ ವಿಜಯದಶಮಿ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ಶ್ರೀ ಚಂಡಿಕಾ ಹೋಮ ನೆರವೇರಿಸಲಾಯಿತು.