ಕಮಲನಗರ: ಔರಾದ್ ಮತ್ತು ಕಮಲನಗರ ತಾಲೂಕಿನ ಪ್ರತಿ ಗ್ರಾಮಗಳಿಗೂ ಮೂಲಸೌಕರ್ಯ ಕಲ್ಪಿಸಲು ಸಕರ್ಾರದಿಂದ ಸಾಕಷ್ಟು ಅನುದಾನ ತರಲಾಗುತ್ತಿದೆ. ಜನರ ಸಂಕಷ್ಟಗಳಿಗೆ ಸ್ಪಂದಿಸಲು ಪ್ರಥಮ ಆದ್ಯತೆ ನೀಡಿದ್ದು, ವಿವಿಧ ಗ್ರಾಮಕ್ಕೆ ನಿರಂತರವಾಗಿ ಭೇಟಿ ನೀಡಲಾಗುತ್ತಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಗ್ರಾಮ ಸಂಚಾರ ನಿಮಿತ್ತ ತಾಲೂಕಿನ ಡೋಣಗಾಂವ (ಎಂ), ರಂಡ್ಯಾಳ, ಹಕ್ಯಾಳ, ಖತಗಾಂವ, ಮದನೂರ, ಕಮಲನಗರ, ಮುರ್ಗ (ಕೆ), ಬಾಲೂರ, ಹೊರಂಡಿ, ಚಾಂಡೇಶ್ವರ ಗ್ರಾಮಗಳಿಗೆ ಭೇಟಿ ನೀಡಿ, ಜನರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ವಿವಿಧ ಯೋಜನೆಗಳಡಿಯಲ್ಲಿ ಕಮಲನಗರ ಗ್ರಾಮದ ವಿಕಾಸಕ್ಕಾಗಿ ಇಲ್ಲಿಯವರೆಗೆ 205 ಕೋಟಿ ರೂ.ಒದಗಿಸಲಾಗಿದೆ ಎಂದು ತಿಳಿಸಿದರು.
ಸಚಿವರು ಹೋದ ಕಡೆಗಳಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆ ಹಂಚಿಕೊಂಡರು. ಗ್ರಾಮಗಳಲ್ಲಿ ಈವರೆಗೆ ನಡೆದ ಅಭಿವೃದ್ಧಿ ಕೆಲಸಗಳನ್ನು ಮೆಲುಕು ಹಾಕಿದರಲ್ಲದೆ ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಸಚಿವರಲ್ಲಿ ಬೇಡಿಕೆ ಇಟ್ಟರು. ಜನರಿಗೆ ತುತರ್ು ಅಗತ್ಯದ ಕೆಲಸಗಳನ್ನು ಶೀಘ್ರ ಕೈಗೆತ್ತಿಕೊಂಡು ಆರಂಭಿಸಲಾಗುತ್ತದೆ. ಉಳಿದ ಕೆಲಸಗಳನ್ನು ಮುಂದಿನ ಆಥರ್ಿಕ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಗ್ರಾಮ ಸಂಚಾರದ ವೇಳೆ ಸಚಿವರು ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ಪಡಿತರ, ಪಿಂಚಣಿಯಂಥ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು. ಕಮಲನಗರ ತಹಸೀಲ್ದಾರ್ ರಮೇಶ ಪೆದ್ದೆ, ತಾಪಂ ಇಒ ಸೈಯದ್ ಫಜಲ್, ಲೋಕೋಪಯೋಗಿ ಇಲಾಖೆ ಎಇಇ ವೀರಶೆಟ್ಟಿ ರಾಠೋಡ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸುಭಾಷ, ಬಿಇಒ ಎಸ್.ಎಸ್.ನಗನೂರ, ಗ್ರಾಪಂ ಅಧ್ಯಕ್ಷ ಶಿವಕುಮಾರ ಝುಲ್ಪೆ, ರಾಮಶೆಟ್ಟಿ ಪನ್ನಾಳೆ, ಶಿವಾನಂದ ವಡ್ಡೆ, ಕಿರಣ ಪಾಟೀಲ್, ರಂಗರಾವ ಜಾಧವ್, ಗಿರೀಶ ಒಡೆಯರ್, ವಿಜಯಕುಮಾರ ಕೋಡಗೆ, ಅವಿನಾಶ ಶಿವಣಕರ, ಅಜೀತ ರಾಗಾ, ಬಾಲಾಜಿ ತೇಲಂಗ್, ನಾಗೇಶ ಪತ್ರೆ, ಶಾಮರಾವ ಬಿರಾದಾರ್, ಸೂರ್ಯಕಾಂತ ಶಿವಣಕರ ಇತರರಿದ್ದರು.
ರು.182 ಕೋಟಿ ವೆಚ್ಚದಲ್ಲಿ ಜೆಜೆಎಂ ಕೆಲಸ ಅನುಷ್ಠಾನ: ಎಲ್ಲರಿಗೂ ಸಮರ್ಪಕವಾಗಿ ನೀರು ತಲುಪಿಸಲು ಸಕರ್ಾರವು ಜಲ ಜೀವನ ಮಿಷನ್(ಜೆಜೆಎಂ) ಯೋಜನೆ ಆರಂಭಿಸಿದೆ. ಔರಾದ್ ಹಾಗೂ ಕಮಲನಗರ ತಾಲೂಕಿನಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ 182 ಕೋಟಿ ರೂ. ಮೊತ್ತದ ಕಾಮಗಾರಿ ಕೈಗೆತ್ತಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವ ಚವ್ಹಾಣ್ ತಿಳಿಸಿದರು. ಈ ಯೋಜನೆಯನ್ನು ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈಗಾಗಲೇ ಆರಂಭಿಸಿದ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ ಶೀಘ್ರ ಪೂರ್ಣಗೊಳಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ನಿದರ್ೇಶನ ನೀಡಿದರು. ಎಲ್ಲಾದರೂ ಕಾಮಗಾರಿ ಕಳಪೆಯಾಗಿರುವುದು ಗಮನಕ್ಕೆ ಬಂದರೆ ಮುಲಾಜಿಲ್ಲದೆ ಸಂಬಂಧಿತರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ವಿವಿಧ ಕಾಮಗಾರಿಗಳಿಗೆ ಚಾಲನೆ: ಖೇಡರ್ಾ(ಬಿ) ಗ್ರಾಮದಲ್ಲಿ ಖೇಡರ್ಾದಿಂದ ಗಂಗನಬೀಡ್ವರೆಗಿನ 4.90 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ, 60 ಲಕ್ಷ ರೂ. ಚರಂಡಿ ಕಾಮಗಾರಿ, 1.31 ಕೋಟಿ ರೂ. ವೆಚ್ಚದ ಜಲ ಜೀವನ ಮಿಷನ್ ಕಾಮಗಾರಿ, 4 ಲಕ್ಷ ರೂ. ರಾಮಮಂದಿರ ಅಭಿವೃದ್ಧಿ, ದಾಬಕಾ(ಸಿ)ನಲ್ಲಿ 2.12 ಕೋಟಿ ರೂ. ಜಲ ಜೀವನ ಮಿಷನ್, 25 ಲಕ್ಷ ರೂ. ಸಿಸಿ ರಸ್ತೆ, 2 ಲಕ್ಷ ರೂ. ಹನುಮಾನ ಮಂದಿರ ಅಭಿವೃದ್ಧಿ, 4 ಲಕ್ಷ ರೂ. ಹೈಮಾಸ್ಟ್ ದೀಪ ಕಾಮಗಾರಿಗೆ ಸಚಿವ ಚವ್ಹಾಣ್ ಶಂಕುಸ್ಥಾಪನೆ ನೆರವೇರಿಸಿದರು. ಗಂಗನಬೀಡ್ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ 2 ಲಕ್ಷ ರೂ.ಉದ್ಯಾನ, ವಾಗನಗೇರಾ, ಮುಕರ್ಿ, ಚಿಮ್ಮೇಗಾಂವ, ಹಂದಿಕೇರಾ, ದೋಪರವಾಡಿ ಇತರೆಡೆ ಶಾಲೆ, ಮಂದಿರ ಅಭಿವೃದ್ಧಿ ಕಾಮಗಾರಿಗಳಿಗೂ ಭೂಮಿಪೂಜೆ ನೆರವೇರಿಸಿದರು.
ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಕೃಷಿ ಹಾಗೂ ಜೆಸ್ಕಾಂ ಸೇರಿ ಗ್ರಾಮ ಮಟ್ಟದಲ್ಲಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸದಾ ಸಕ್ರಿಯವಾಗಿ ಕೆಲಸ ಮಾಡಬೇಕು. ಜನರಿಗೆ ಯಾವುದೇ ಅನನುಕೂಲ ಆಗದಂತೆ ಕಾರ್ಯನಿರ್ವಹಿಸಬೇಕು. ಜನರಿಗೆ ತೊಂದರೆ ಕೊಟ್ಟರೆ ಕ್ಷೇತ್ರದಿಂದ ಜಾಗ ಖಾಲಿ ಮಾಡಿಸುವೆ.
|ಪ್ರಭು ಚವ್ಹಾಣ್, ಪಶು ಸಂಗೋಪನೆ ಸಚಿವ