ಬೀದರ್: ಕಮಠಾಣ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸಬೇಕು ಎಂದು ರಾಜ್ಯ ಅಭಿವೃದ್ಧಿ, ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಬೇಡಿಕೆ ಮಂಡಿಸಿದರು.
ಶಾಂತೀಶ್ವರಿ ಸಂಸ್ಥೆ, ಮುರಾರ್ಜಿ ದೇಸಾಯಿ ಪಿಯು ಕಾಲೇಜು, ಜಗದ್ಗುರು ಪಂಚಾಚಾರ್ಯ ಯುವಕ ಸಂಘ, ಈಶ್ವರಿ ಮಹಿಳಾ ಮಂಡಳದಿಂದ ಕಮಠಾಣದಲ್ಲಿ ಆಯೋಜಿಸಿದ್ದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಮಠಾಣ ಅಧಿಕ ಜನಸಂಖ್ಯೆ ಹೊಂದಿರುವ ದೊಡ್ಡ ಪಂಚಾಯಿತಿ. ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಮುರಾರ್ಜಿ ದೇಸಾಯಿ ಪಿಯು ಕಾಲೇಜು ಪ್ರಾಚಾರ್ಯ ರವೀಂದ್ರ ಚಟ್ನಳ್ಳಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ, ನೆಹರು ಯುವ ಕೇಂದ್ರ ಸಮನ್ವಯಾಧಿಕಾರಿ ಮಯೂರಕುಮಾರ ಗೋರ್ಮೆ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಕರೀಮಾ ಫಾರೂಖ್ಮಿಯಾ, ಉಪಾಧ್ಯಕ್ಷ ವಿಜಯಕುಮಾರ ನಾಗಣ್ಣ, ಸದಸ್ಯರಾದ ಶೇಖ್ ಮೆಹಬೂಬ್, ಮುಫೀಜ್ ಸಾದಕ್ ಅಲಿ, ರಾಜಕುಮಾರ ಯಾಬಾ, ಶಾರದಾಬಾಯಿ, ರಹೀಮಾ ಬೇಗಂ, ಭೀಮಣ್ಣ, ಮಿರೋನಿಸಾ ಅಹ್ಮದ್, ಖಾಲೇದ್ ಸಾಬ್, ಇಸ್ಮಾಯಲ್ ಅಹ್ಮದ್, ಅಬ್ದುಲ್ ಖಾದರ್, ಮಹ್ಮದ್ ಅಜುರೋದ್ದಿನ್, ಮಹ್ಮದ್ ಇರ್ಪಾನ್, ಶೋಭಾ, ಚಿನ್ನಮ್ಮ, ರೂಪಾ, ಗುಂಡಪ್ಪ ಅವರನ್ನು ಸನ್ಮಾನಿಸಲಾಯಿತು. ಪಿಡಿಒ ಶಂಕರರಾವ, ಕಾರ್ಯದರ್ಶಿ ಸುಭಾಷ, ಲೆಕ್ಕಿಗ ಗಣಪತಿ, ಮುಖಂಡ ಅರುಣಕುಮಾರ ಇದ್ದರು. ನಾಗಯ್ಯ ಸ್ವಾಮಿ ಸ್ವಾಗತಿಸಿದರು. ಪ್ರಶಾಂತ ಹೊನ್ನಾ ನಿರೂಪಣೆ ಮಾಡಿದರು. ಗೌತಮ ವಂದಿಸಿದರು.
ಗ್ರಾಪಂಗೆ ಹೆಚ್ಚಿನ ಯುವಕರು ಆಯ್ಕೆಯಾಗಿದ್ದು ಸಂತಸದ ಸಂಗತಿ. ಯುವಕರಿಂದ ಹೆಚ್ಚಿನ ಅಭಿವೃದ್ಧಿ ನಿರೀಕ್ಷೆ ಮಾಡಲಾಗುತ್ತಿದೆ. ಜನಪ್ರತಿನಿಧಿಗಳು ಸೇರಿ ಎಲ್ಲರೂ ಕಮಠಾಣ ಪಂಚಾಯಿತಿ ಮಾದರಿ ಮಾಡಲು ಶ್ರಮಿಸೋಣ.| ಶಿವಯ್ಯ ಸ್ವಾಮಿರಾಜ್ಯ ಅಭಿವೃದ್ಧಿ, ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ