ಜಿಲ್ಲೆ

ಕಬ್ಬು ಬೆಂಕಿಗಾಹುತಿ

Mandya

ಕೆ.ಆರ್.ಪೇಟೆ: ತಾಲೂಕಿನ ಕರೋಟಿ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಕಬ್ಬು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಗ್ರಾಮದ ಗಜೇಂದ್ರ ಅವರಿಗೆ ಸೇರಿದ ಕಬ್ಬು ಭಸ್ಮವಾಗಿದೆ.
ಗ್ರಾಮದ ಹೊರವಲಯದಲ್ಲಿರುವ 1.30 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಕಟಾವಿಗೆ ಬಂದಿತ್ತು. ಕಟಾವಿಗೆ ಸಕ್ಕರೆ ಕಾರ್ಖಾನೆಯಿಂದ ಅನುಮತಿಗಾಗಿ ಕಾದಿದ್ದರು. ಜಮೀನಿನ ಮೇಲೆ ಹಾದುಹೋಗಿರುವ ಸೆಸ್ಕ್‌ನ 11 ಕೆ.ವಿ.ಸಾಮರ್ಥ್ಯದ ತಂತಿಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ಕಬ್ಬಿಗೆ ಬೆಂಕಿ ತಗುಲಿದೆ.
ವಿಷಯ ತಿಳಿದು ಜಮೀನಿನ ಬಳಿ ತೆರಳಿದಾಗ ಕಬ್ಬು ಸುಟ್ಟು ಹೋಗಿದೆ. ವರ್ಷಪೂರ್ತಿ ಶ್ರಮಪಟ್ಟು ಬೆಳೆದಿದ್ದ ಕಬ್ಬು ಸಂಪೂರ್ಣ ಸುಟ್ಟಿರುವುದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಕಬ್ಬು ಬೆಳೆಯಲು ಲಕ್ಷಕ್ಕೂ ಹೆಚ್ಚು ಸಾಲ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ನಷ್ಟಕ್ಕೆ ಸೆಸ್ಕ್ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.