ಮೃತ ಕಾರ್ಮಿಕ ನದರ್ ತಡಸಿ  
ಜಿಲ್ಲೆ

ಕಬ್ಬು ಕಟಾವು ಕಾರ್ಮಿಕನ ಮರ್ಡರ್..!

ಬಾಗಲಕೋಟೆ: ಕಾರ್ಮಿಕನೊಬ್ಬನನ್ನು ಕಿಡ್ನಾಪ್ ಮಾಡಿ ಕೋಣೆಯಲ್ಲಿ ಕೂಡಿಹಾಕಿದ್ದ ವೇಳೆ ಆ ವ್ಯಕ್ತಿಯಲ್ಲಿ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ಮುಚ್ಚಿಹಾಕಲು ಶವವನ್ನು ನದಿಗೆ ಎಸೆದ ಆರೋಪದ ಮೇಲೆ ಜಿಲ್ಲೆಯ ಮೂವರನ್ನು ಮಹಾರಾಷ್ಟç ಪೊಲೀಸರು ಬಂಽಸಿ ಕರೆದುಕೊಂಡು ಹೋಗಿರುವ ಪ್ರಕರಣ ಮುಧೋಳ ತಾಲೂಕಿನ ಚಿಕ್ಕೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿಯನ್ನು ಮಹಾರಾಷ್ಟç ಮೂಲದ ನದರ್ ಗುಲ್ತಾಜ್ ತಡಸಿ(೩೦) ಎಂದು ಗುರುತಿಸಲಾಗಿದ್ದು, ಈತ ಕಬ್ಬು ಕಟಾವು ಮಾಡಲು ಎರಡು ಗ್ಯಾಂಗ್ ಕಳುಹಿಸುವುದಾಗಿ ಚಿಕ್ಕೂರ ಗ್ರಾಮದ ಮೂವರು ರೈತರಿಂದ ೩ ಲಕ್ಷ ರೂ. ಮುಂಗಡ ಪಡೆದುಕೊಂಡಿದ್ದ. ಗ್ಯಾಂಗ್‌ನವರು ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಚಿಕ್ಕೂರ ಗ್ರಾಮದ ಈ ಮೂವರು ರೈತರು ನದರ್ ತಡಸಿಯನ್ನು ಅಪಹರಿಸಿಕೊಂಡು ಚಿಕ್ಕೂರ ಗ್ರಾಮದ ಕೋಣೆಯಲ್ಲಿ ಕೂಡಿ ಹಾಕಿದ್ದರು. ಇದರಿಂದ ಮನನೊಂದ ಕಾರ್ಮಿಕ ಅದೇ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು, ಇದರಿಂದ ತಮ್ಮ ಮೇಲೆ ಆರೋಪ ಬರಬಹುದು ಎನ್ನುವ ಕಾರಣಕ್ಕೆ ಪ್ರಕರಣ ಮುಚ್ಚಿಹಾಕಲೆಂದು ಅವರೆಲ್ಲ ಶವವನ್ನು ತೆಗೆದುಕೊಂಡು ಕೋಲಾರ್ ಸೇತುವೆಯಲ್ಲಿ ಎಸೆದು ಏನು ನಡೆದಿಲ್ಲ ಎನ್ನುವಂತೆ ಇದ್ದರು.

ಆದರೆ, ಈ ಬಗ್ಗೆ ಜಿಲ್ಲೆಯ ಪೊಲೀಸರಿಗೆ ಅನುಮಾನ ಮೂಡಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅತ್ತ ಮಹಾರಾಷ್ಟçದಲ್ಲಿ ಕಾರ್ಮಿಕನ ಕಡೆಯವರು ಜಲಗಾಂವ್ ಜಿಲ್ಲೆಯ ರವೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇದೀಗ ಅಲ್ಲಿನ ಪೊಲೀಸರು ಜಿಲ್ಲೆಗೆ ಬಂದು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ.

ಕಾರ್ಮಿಕನನ್ನು ಕಿಡ್ನಾಪ್ ಮಾಡಿ ಪ್ರಕರಣ ಮುಚ್ಚಿ ಹಾಕಲು ಶವ ನದಿಗೆ ಎಸೆದ ಆರೋಪದ ಮೇಲೆ ಮುಧೋಳ ತಾಲೂಕಿನ ಚಿಕ್ಕೂರ ಗ್ರಾಮದ ಬಾಲಾಗೌಡ ಪಾಟೀಲ, ಮಂಜುನಾಥ ಪೂಜಾರಿ ಹಾಗೂ ಸುನೀಲ ದಾಸರೆಡ್ಡಿ ಅವರನ್ನು ಮುಧೋಳ ಪೊಲೀಸರಿಂದ ಮಹಾರಾಷ್ಟç ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ಕರೆದುಕೊಂಡು ಹೋಗಿದ್ದಾರೆ.

ಈ ಘಟನೆ ಕಳೆದ ವರ್ಷ ನ.೨೯ ರಂದು ಕಾರ್ಮಿಕರನ್ನು ಅಪಹರಿಸಿ ಕರೆದುಕೊಂಡು ಬಂದಿದ್ದರು. ಡಿ. ೧ ರಂದು ಚಿಕ್ಕೂರ ಗ್ರಾಮದ ಕೋಣೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅಂದು ತಡರಾತ್ರಿ ಶವವನ್ನು ಮೂವರು ಆರೋಪಿಗಳು ಸೇರಿ ಕೋಲಾರ ಸೇತುವೆ ಬಳಿ ನದಿಗೆ ಎಸೆದಿದ್ದರು. ಇದೀಗ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಬಂಽಸಲಾಗಿದೆ. ಮತ್ತೊಂದೆಡೆ ನದಿಯಲ್ಲಿ ಕಾರ್ಮಿಕನ ಶವ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದು, ಯಾವುದೇ ಶವ ಪತ್ತೆಯಾಗಿಲ್ಲ. ಒಂದು ತಿಂಗಳು ೩ ದಿನಗಳು ಆಗಿದ್ದು, ಆ ಭಾಗದಲ್ಲಿ ಮೊಸಳೆಗಳು ಇವೆ ಎನ್ನಲಾಗುತ್ತಿದ್ದು, ಸದ್ಯ ನದಿಯಲ್ಲಿ ಕಾರ್ಮಿಕನ ಶವ ಇನ್ನೂ ಸಿಕ್ಕಿಲ್ಲ. ಇದೀಗ ಪ್ರಕರಣ ಮಹಾರಾಷ್ಟç ಪೊಲೀಸರಿಗೆ ಹಸ್ತಾಂತರ ಮಾಡಲಾಗಿದ್ದು, ಅವರು ತನಿಖೆ ಮುಂದುವರೆಸಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.