ಜಿಲ್ಲೆ

ಕಬ್ಬಿನ ಬಾಕಿ ಹಣ ಬೇಗ ಕೊಡಿ

ಬೀದರ್: ಕೃಷಿಂಗ್ ಮುಗಿದು ಒಂದೂವರೆ ತಿಂಗಳು ಕಳೆದರೂ ಜಿಲ್ಲೆಯ ಸಹಕಾರ ಹಾಗೂ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಿದ ಅನೇಕ ರೈತರ ಕೈಗೆ ಹಣ ಸೇರಿಲ್ಲ. ಕರೊನಾ ಸಂಕಷ್ಟದಲ್ಲಿರುವ ರೈತರಿಗೆ ಎರಡು ವಾರದೊಳಗೆ ಬಾಕಿ ಪಾವತಿಸದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ರೈತ ಸಂಘ (ಕೋಡಿಹಳ್ಳಿ ಬಣ) ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ಎಚ್ಚರಿಸಿದ್ದಾರೆ.

ಕಾರ್ಖಾನೆಗೆ ಕಬ್ಬು ಸಾಗಿಸಿದ ಎರಡು ವಾರದೊಳಗೆ ರೈತರ ಖಾತೆಗೆ ಹಣ ಜಮೆ ಮಾಡಬೇಕು ಎಂಬ ನಿಯಮವಿದೆ. ಆದರೆ ಈ ನಿಯಮ ಇಲ್ಲಿ ಪಾಲನೆ ಮಾಡಿಲ್ಲ. ಪ್ರಸಕ್ತ ಹಂಗಾಮಿಗೆ ಟನ್ ಕಬ್ಬಿಗೆ 2400 ರೂ. ದರ ನಿಗದಿಪಡಿಸಿದ ಜಿಲ್ಲಾಡಳಿತ ನಿರ್ಧಾರಕ್ಕೂ ಕಾರ್ಖಾನೆ ಆಡಳಿತ ಮಂಡಳಿ ಒಪ್ಪಿಲ್ಲ. ಟನ್ ಕಬ್ಬಿಗೆ ಕೇವಲ 1900 ರೂ. ನೀಡಲಾಗಿದೆ. ಲಾಕ್ ಡೌನ್ ನಿಂದ ರೈತರು ಹಣ ಇಲ್ಲದೆ ಪರದಾಡುತ್ತಿದ್ದಾರೆ. ಎರಡು ವಾರದೊಳಗೆ ಕಬ್ಬಿನ ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಕಾರ್ಖಾನೆಗಳ ಅಧ್ಯಕ್ಷರ ಮನೆ ಎದುರು ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.