ಜಿಲ್ಲೆ

ಕಬ್ಬಳಿ ಗ್ರಾಪಂಗೆ ನಂಜಮ್ಮ ಉಪಾಧ್ಯಕ್ಷೆ

ಚನ್ನರಾಯಪಟ್ಟಣ: ತಾಲೂಕಿನ ಕಬ್ಬಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಬಿಳಿಕೆರೆ ಗ್ರಾಮದ ನಂಜಮ್ಮ ರಂಗೇಗೌಡ ಬುಧವಾರ ಅವಿರೋಧ ಆಯ್ಕೆಯಾದರು.


ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಬಿಳಿಕೆರೆ ಗ್ರಾಮದ ನಂಜಮ್ಮ ರಂಗೇಗೌಡ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಘೋಷಿಸಲಾಯಿತು.


ಗ್ರಾಮ ಪಂಚಾಯಿತಿಯು 14 ಸದಸ್ಯರ ಬಲ ಹೊಂದಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲ ಸದಸ್ಯರು ಹಾಜರಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ನಂಜಮ್ಮ ರಂಗೇಗೌಡ ಅವರನ್ನು ಗ್ರಾಪಂನಿಂದ ಅಭಿನಂದಿಸಲಾಯಿತು. ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು.


ತಾಪಂ ಕಾರ್ಯನಿರ್ವಹಣಾಧಿಕಾರಿ ಸುನೀಲ್‌ಕುಮಾರ್ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಗ್ರಾಪಂ ಅಧ್ಯಕ್ಷ ಕೆ.ಪೃಥ್ವಿಕುಮಾರ್, ಮಾಜಿ ಅಧ್ಯಕ್ಷರಾದ ಬಿಳಿಕೆರೆ ರಂಗೇಗೌಡ, ಶಿವನಂಜೇಗೌಡ, ರಾಜೇಗೌಡ, ಪಿಡಿಒ ಕಿರಣ್, ಕಾರ್ಯದರ್ಶಿ ಹನುಮೇಗೌಡ, ಸದಸ್ಯರು, ಸಿಬ್ಬಂದಿ ಇದ್ದರು.