ಜಿಲ್ಲೆ

ಕಪನೂರ ಸೇರಿ ನಾಲ್ವರ ಮನೆ ಮೇಲೆ ಸಿಐಡಿ ದಾಳಿ

ಕಲಬುರಗಿ: ಬೀದರ್‌ನ ಸಚಿನ ಪಾಂಚಾಳ ಆತ್ಮಹತ್ಯೆ ಡೆತ್‌ನೋಟ್‌ನಲ್ಲಿ ಉಲ್ಲೇಖಿತ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಸೇರಿ ಇತರರ ಮನೆಗಳ ಮೇಲೆ ಮಂಗಳವಾರ ಸಿಐಡಿ ತಂಡ ದಾಳಿ ನಡೆಸಿ, ಪರಿಶೀಲಿಸಿತು. ಕಂಪನೂರ ಇಂಡಸ್ಟಿçಯಲ್ ಪ್ರದೇಶದಲ್ಲಿನ ರಾಜು ಕಪನೂರ ಮನೆ, ಘಾಟ್‌ಗೆ ಲೇಔಟ್‌ನಲ್ಲಿರುವ ಗೋರಖನಾಥ, ರಾಮನಗೌಡ ಮನೆ, ಗಂಜ್ ಪ್ರದೇಶದಲ್ಲಿರುವ ನಾಗಭುಜಂಗೆ ಮನೆ ಮೇಲೆ ಸಿಐಡಿ ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಿತು. ನಾಲ್ವರು ಆರೋಪಿಗಳ ಮನೆಯಲ್ಲಿರುವ ದಾಖಲೆ, ಎಲೆಕ್ಟಾçನಿಕ್ ಗ್ಯಾಜೆಟ್‌ಗಳನ್ನು ಪರಿಶೀಲಿಸಲಾಯಿತು. ಏಕಕಾಲಕ್ಕೆ ನಾಲ್ಕು ಮನೆಗಳ ಮೇಲೆ ದಾಳಿ ನಡೆಸಿದ್ದು, ಇಬ್ಬರು ಡಿವೈಎಸ್‌ಪಿ, ಇಬ್ಬರು ಇನ್‌ಸ್ಪೆಕ್ಟರ್, ೪೦ ಸಿಬ್ಬಂದಿಯ ತಂಡ ದಾಳಿ ನಡೆಸಿ, ಮಾಹಿತಿ ಕಲೆ ಹಾಕಿದೆ.