ಕುಶಾಲನಗರ: ಕುಶಾಲನಗರ ಆರ್ಯವೈಶ್ಯ ಮಂಡಳಿ ನೇತೃತ್ವದಲ್ಲಿ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಆಚರಿಸಲಾಗುತ್ತಿದೆ. 9 ದಿನವೂ ವಾಸವಿ ಮಾತೆಗೆ ಬಾಲಪ್ರಸೂತಿಕ, ವೃಷಭವಾಹಿನಿ, ಕಮಲವಾಹಿನಿ, ಮಯೂರವಾಹಿನಿ, ಅನ್ನಪೂರ್ಣೇಶ್ವರಿ, ಗಜವಾಹಿನಿ, ಸರಸ್ವತಿ, ಸಿಂಹವಾಹಿನಿ, ಮಹಿಷಮರ್ಧಿನಿ ಮತ್ತು ಸರ್ವಾಭರಣ ಅಲಂಕಾರ ಮಾಡಲಾಗುವುದು ಎಂದು ಅಧ್ಯಕ್ಷ ಬಿ.ಎಲ್.ಉದಯಕುಮಾರ್ ತಿಳಿಸಿದರು.
ಪ್ರತಿದಿನ ಬೆಳಗ್ಗೆ 7 ಗಂಟೆಗೆ ವಾಸವಿ ಮಾತೆಗೆ ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. ರಾತ್ರಿ 8.30 ಗಂಟೆಗೆ ಮಹಾಮಂಗಳಾರತಿ ನಡೆಸಿ ತೀರ್ಥಪ್ರಸಾದ ವಿನಿಯೋಗ ಮಾಡಲಾಗುವುದು. ದಸರಾ ಹಬ್ಬದ ವಿಶೇಷವಾಗಿ ದೇವಸ್ಥಾನದಲ್ಲಿ ವಿವಿಧ ರೀತಿಯ ಬೊಂಬೆಗಳನ್ನು ಜೋಡಿಸಲಾಗಿದೆ ಎಂದರು.