ಜಿಲ್ಲೆ

ಕನ್ನಡಿಗರಿಗೆ ಸೌಲಭ್ಯಗಳು ದೊರೆಯಲಿ

ಬಾಗಲಕೋಟೆ: ಮೈಸೂರು ರಾಜ್ಯ  ಏಕೀಕರಣವಾಗಿ ೬೮ ವರ್ಷಗಳು ಕಳೆದಿವೆ. ಮೈಸೂರು ರಾಜ್ಯಕ್ಕೆ ಕರ್ನಾಟಕ  ಎಂದು ಹೆಸರು ನಾಮಕರಣವಾಗಿ  ೫೦ ವರ್ಷಗಳಾದವು ಆದರೂ ಕನ್ನಡಿಗರಿಗೆ ಸಿಗಬೇಕಾದ ಅವಕಾಶಗಳು, ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಸಾಹಿತಿ. ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಡಾ.ಸಿ.ಎಂ.ಜೋಶಿ ಅವರು ಹೇಳಿದರು.
ಶುಕ್ರವಾರ ಜಿಲ್ಲಾ ಕಸಾಪ ಭವನದಲ್ಲಿ ಕನ್ನಡ ರಾಜ್ಯೋತ್ಸವದ  ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ  ಜಲ, ನೆಲ, ನಾಡು ನುಡಿಗಾಗಿ ನಮ್ಮ ಹಿರಿಯರು  ಮಾಡಿದ ತ್ಯಾಗ ಬಲಿದಾನದ ಪ್ರತೀಕವೇ ಕನ್ನಡದ ಅಸ್ಮೀತೆ. ಅದನ್ನು ಕಾಪಾಡಿಕೊಂಡು ಬರುವುದು ನಮ್ಮೇಲ್ಲರ ಹೊಣೆಯಾಗಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆ. ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರಕುತ್ತಿಲ್ಲ. ಅನ್ಯ ಭಾಷಿಗರಿಂದ  ಕನ್ನಡಿಗರು ಅವಕಾಶ ವಂಚಿತರಾಗುತ್ತಿದ್ದಾರೆ. ಸರ್ಕಾರ  ಕೂಡಲೇ ಮಹಾಜನ ವರದಿ ಮತ್ತು ಡಾ.ಮಹಿಷಿ ವರದಿಗಳನ್ನು ಜಾರಿಗೆ ತಂದು ಕನ್ನಡಿಗರೇ ಕರ್ನಾಟಕದಲ್ಲಿ ಸಾರ್ವಭೌಮರು ಎಂಬುವ ಹಕ್ಕನ್ನು ನೀಡಬೇಕು. ಗೋಕಾಕ ಚಳುವಳಿಗಳಂತಹ ಚಳುವಳಿಗಳಿಗೆ ಅವಕಾಶ ನೀಡಬಾರದು. ಕನ್ನಡಿಗರಿಗೆ ಕರ್ನಾಟಕದಲ್ಲಿ ಸರ್ವಕ್ಷೇತ್ರಗಳಲ್ಲಿ  ಅವಕಾಶ ಮತ್ತು ಮೀಸಲಾತಿ ಸಿಗುವಂತಾಗಲಿ ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಿಗರ ಹೋರಾಟದ ಪ್ರತಿಫಲವಾದ ಕನ್ನಡ ನಾಡು ಕನ್ನಡಿಗರ ಆಸ್ತಿಯಾಗಲಿ. ಕನ್ನಡಕ್ಕೆ ಎಲ್ಲ ಸ್ಥಾನಮಾನಗಳು ಸಿಗಲಿ ಎಂದರು.
ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಶರಣ ಸಾಹಿತಿ ಭಗವತಿ, ಡಾ. ದಾನಶೆಟ್ಟಿ, ವಿಜಯಶ್ರೀ ಮುರನಾಳ, ಬಸವರಾಜ , ಶಂಕರ ಹೂಲಿ, ಆರ್.ಸಿ ಚಿತ್ತರಗಿ, ಈಶ್ವರ ವಜ್ರಮಟ್ಟಿಮಠ, ಅಶೋಕ ಉಪಸ್ಥಿತರಿದ್ದರು.
ಡಾ.ಚಂದ್ರಶೇಖರ ಕಾಳನ್ನವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.