ಕಲಬುರಗಿ: ಸಮರ್ಪಕ ಕಾನೂನು ರೂಪಿಸಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಒದಗಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ರP್ಷÀಣಾ ವೇದಿಕೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಸಾಂಕೇತಿಕ ಧರಣಿ ಮಾಡಲಾಯಿತು.
ಎಲ್ಲ ಖಾಸಗಿ ಸಂಸ್ಥೆಗಳಿಗೆ ಸಿ ಮತ್ತು ಡಿ ದರ್ಜೆಯ ಶೇ.೧೦೦ ಹುದ್ದೆ ಕನ್ನಡಿಗರಿಗೆ ಮೀಸಲಿಡಬೇಕು. ಎಲ್ಲ ಖಾಸಗಿ ಇತರೆ ಹುz್ದÉಗಳಲ್ಲಿ ಶೇ.೮೦ ಹುz್ದÉ ಕನ್ನಡಿಗರಿಗೆ ಮೀಸಲಿಡಬೇಕು. ೧೫ ವರ್ಷ ಕರ್ನಾಟದಲ್ಲಿ ನೆಲೆಸಿದವರನ್ನು ಕನ್ನಡಿಗರೆಂದು ಪರಿಗಣಿಸುವ ನಿಯಮ ತೆಗೆದು, ಕನ್ನಡ ಬರವಣಿಗೆಯ ಪರೀಕ್ಷೆ ನೀಡಿ ಅದರಲ್ಲಿ ಉತ್ತೀರ್ಣರಾದವರನ್ನು ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು. ನಿಯಮಾವಳಿಗಳನ್ನು ಪಾಲಿಸದ ಸಂಸ್ಥೆಗಳ ಮಾನ್ಯತೆ ರದ್ದುಗೊಳಿಸಿ ದಂಡ ವಿಧಿಸಿ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ವಲಯ ಘಟಕಗಳಲ್ಲಿ ಕನ್ನಡಿಗರಿಗೆ ಶೇ.೧೦೦ ಮೀಸಲು ನೀಡಬೇಕು. ಕೇಂದ್ರ ಸರ್ಕಾರ ಇಲಾಖೆಗಳು ಮತ್ತು ಸಾರ್ವಜನಿಕ ವಲಯ ಘಟಕಗಳಲ್ಲಿ ಗ್ರೂಪ್ ಸಿ ಮತ್ತು ಡಿ ಹುz್ದÉಗಳು ಕನ್ನಡಿಗರಿಗೆ ಶೇ.೧೦೦ ಮೀಸಲು ನೀಡಬೇಕು. ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯ ಘಟಕಗಳಲ್ಲಿ ಸಿ ಮತ್ತು ಡಿ ದರ್ಜೆ ಹುz್ದÉಗಳ ಹೊರತಾದ ಉಳಿದೆಲ್ಲ ಹುz್ದÉಗಳಿಗೂ ಶೇ.೯೦ ಮೀಸಲು ನೀಡಬೇಕು. ರಾಜ್ಯ-ಕೇಂದ್ರ ಸರ್ಕಾರದ ಇಲಾಖೆಗಳು ಸಾರ್ವಜನಿಕ ವಲಯದ ಘಟಕಗಳಲ್ಲಿ ಉದ್ಯೋಗ ಮೀಸಲು ಕಲ್ಪಿಸಲು ವಿಫಲವಾಗುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ಜಿ¯್ಲÁ ಘಟಕದ ಅಧ್ಯP್ಷÀ ಪುನೀತರಾಜ ಕವಡೆ, ಮಹೇಶ ಎಸ್.ಕಾಶಿ, ನೀಲಕಂಠರಾವ ಪಾಟೀಲ್, ಈರಣ್ಣ ಆಳಂದ, ದೇವಿಂದ್ರ ಮಯೂರ, ದೇವಿಂದ್ರಪ್ಪಗೌಡ ಪಾಟೀಲ್, ಚಂದರ ಚವ್ಹಾಣ್, ಯಲ್ಲಾಲಿಂಗ ಹಯ್ಯಾಳಕರ್, ಸಂಗಮೇಶ ಬೋರೊಟಿ, ಯಲ್ಲಪ್ಪ ಬಂಕಲಗಿ, ನಿರ್ಮಲ ತಳವಾರ, ನಿಸಾರ ಅಹ್ಮದ್ ಖಾನ್, ಕಲ್ಯಾಣಿ ತಳವಾರ, ಶಂಕರಗೌಡ ಯಡ್ರಾಮಿ, ಶಬ್ಬಿರ್ ಸಾಬ್, ಸುರೇಶ ಹೋಸಮನಿ, ನಂದಕುಮಾರ ಸೇಡಂ, ಪ್ರಭುಲಿಂಗ ಯಳವಂತಗಿ ಇತರರಿದ್ದರು.