ಚಿತ್ರದುರ್ಗ: ಎಲ್ಲ ರಾಜ್ಯಗಳ ಅಭಿವೃದ್ಧಿ, ಹಸಿದ ಹೊಟ್ಟೆಗೆ ಅನ್ನ, ಉದ್ಯೋಗ, ರಾಜ್ಯಗಳಿಗೆ ಅನ್ಯಾಯವಾಗದ ರೀತಿ ಅನುದಾನ ಹಂಚಿಕೆ, ಇವೆಲ್ಲವನ್ನೂ ಕೈ ಬಿಟ್ಟು ತಾರತಮ್ಯ ನೀತಿಯೊಂದಿಗೆ ಮಂಡಿಸಿರುವುದು ಬಜೆಟ್ ಹೇಗಾಗುತ್ತದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಈ ಹಿಂದಿನ ಬಜೆಟ್ ಅವಲೋಕಿಸಿದರೆ, ಈಗಿನದ್ದನ್ನು ಬಜೆಟ್ ಎಂದು ಭಾವಿಸಲಾಗದು. ಈ ಬಜೆಟ್ ಅಧಿಕಾರ ಉಳಿಸಿಕೊಳ್ಳಲು, ಪ್ರತಿಪಕ್ಷಗಳ ವಿರುದ್ಧ ದ್ವೇಷಕಾರುವ ಮುಂಗಡಪತ್ರ. ಈ ಹಿಂದಿನ ಕೇಂದ್ರ ಸರ್ಕಾರಗಳ ಅವಧಿಯಲ್ಲಿ ಎಲ್ಲ ರಾಜ್ಯಗಳ ಹಿತದೃಷ್ಟಿಯಿಂದ ಬಜೆಟ್‌ಗಳನ್ನು ಮಂಡಿಸಲಾಗುತ್ತಿತ್ತು. ಮನ ಮೋಹನ್‌ಸಿಂಗ್ ಸರ್ಕಾರದ ಬಜೆಟ್‌ಗಳಲ್ಲಿ ಅಭಿವೃದ್ಧಿ ಪರ ಯೋಜನೆಗಳಿದ್ದವು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಬಜೆಟ್‌ನಲ್ಲೂ ದ್ವೇಷ ಪ್ರದರ್ಶಿಸಲಾಗುತ್ತಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಈ ಬಜೆಟ್ ಎಂದಿದ್ದಾರೆ.
ಕರ್ನಾಟಕ, ತಮಿಳುನಾಡು, ಪಶ್ಚಿಮಬಂಗಾಲ, ತೆಲಂಗಾಣ ಸಹಿತ ನಾನಾ ರಾಜ್ಯಗಳಿಗೆ ಪುಡಿಗಾಸು ನೀಡದೆ ವಂಚಿಸಲಾಗಿದೆ. ಬಿಹಾರ, ಆಂಧ್ರ ಪ್ರದೇಶಗಳಿಗೆ ಭರಪೂರ ದುಡ್ಡು ನೀಡಲಾಗಿದೆ. ಕನ್ನಡಿಗರನ್ನು ಮರೆತ ಮೊದಲ ಬಜೆಟ್ ಇದಾಗಿದೆ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಮುಂದುವರಿದಿದೆ ಎಂದಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿತ 5300 ಕೋಟಿ ರೂ.ಅನುದಾನ ಬಿಡುಗಡೆ, ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದೆ. ನಮ್ಮ ಜಿಲ್ಲೆ ಜನರಿಗೆ ಅನ್ಯಾಯ ಮಾಡಲಾಗಿದೆ. ರಾಜ್ಯಬಿಜೆಪಿ ಸಂಸದರು ನೆಪ ಮಾತ್ರ ಪ್ರತಿನಿಧಿಗಳಾಗಿದ್ದಾರೆ. ಬಿಜೆಪಿ ಮುಖಂಡರಿಗೆ ೇರಾವ್ ಹಾಕುವ ಮೂಲಕ ನಮ್ಮ ಹಕ್ಕು ಪಡೆಯಬೇಕಿದೆ ಎಂದು ಆಂಜನೇಯ ತಿಳಿಸಿದ್ದಾರೆ.