ನಾಗಮಂಗಲ: ಹೆಮ್ಮರವಾಗಿ ಬೆಳೆದು ನಿಂತಿರುವ ನಮ್ಮ ಮಾತೃಭಾಷೆ ಕನ್ನಡವನ್ನು ಹೆಚ್ಚು ಬಳಸುವ ಮೂಲಕ ಭಾಷೆ ಮೇಲಿನ ಪ್ರೀತಿಯನ್ನು ಪ್ರದರ್ಶಿಸಬೇಕಿದೆ ಎಂದು ತಾಲೂಕಿನ ಕೂಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎನ್.ಕೆ.ನರಸಿಂಹಪ್ರಸಾದ್ ಹೇಳಿದರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವವನ್ನು ಮನೆ ಹಬ್ಬವಾಗಿ ಆಚರಿಸಲು ಸಾಧ್ಯವಾಗದಿರುವುದು ಸೋಜಿಗವಾಗಿದೆ. ನಾವು ಕನ್ನಡವನ್ನು ನಿತ್ಯೋತ್ಸವವಾಗುವಂತೆ ಪ್ರತಿ ಮನೆಯಲ್ಲಿ ಹಬ್ಬವಾಗಿ ಆಚರಿಸಿದರೆ ಮಾತ್ರ ನಮ್ಮ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲು ಸಾಧ್ಯ ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಮಂಜುನಾಥ್ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ನಿರಂಜನ್ ಮಾತನಾಡಿದರು. ಸಂಘದ ಅಧ್ಯಕ್ಷ ಕೆ.ಸೀತಾರಾಮು, ಪದಾಧಿಕಾರಿಗಳಾದ ಸಿ.ಎನ್.ಮಂಜುನಾಥ್, ವಸಂತಕುಮಾರ್, ಚನ್ನಕೇಶವ, ಯು.ವಿ.ಉಲ್ಲಾಸ್, ಪಿ.ಜೆ.ಜಯರಾಮು, ಬಿ.ಎಚ್.ರವಿ, ಯೋಗೇಶ್, ಮಹೇಶ್, ವಸಂತ್‌ಕುಮಾರ್ ಹಾಗೂ ಪತ್ರಿಕಾ ವಿತರಕರು ಇದ್ದರು.