ಆಲೂರು: ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸುವ ಅವಶ್ಯಕತೆ ಇದೆ.ಮಕ್ಕಳಿಗೆ ನಾವು ಸಾಹಿತ್ಯವನ್ನು ಓದುವ ಮೂಲಕ ಸಾಹಿತ್ಯವನ್ನು ಸಾಹಿತ್ಯದ ವಿಚಾರವನ್ನು ಅವರಿಗೆ ಹೇಳಬೇಕೆಂದು ೨ನೇ ಆಲೂರು ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಂ. ಶಿವಣ್ಣ ನುಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವತಿಯಿಂದ ಆಯೋಜಿಸಿದ್ದ ದ್ವಿತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,
ಕನ್ನಡವನ್ನು ಧರಿಸಬೇಕು ಮತ್ತು ಆಧರಿಸಬೇಕು. ಸಾಹಿತ್ಯ ಸಮ್ಮೇಳನ ವೈಭವಕ್ಕೆ ಸೀಮಿತವಾಗದೆ ಸಾಹಿತ್ಯ ಉಳಿಸುವುದಕ್ಕೆ ಪ್ರೇರಣೆಯಾಗಬೇಕು, ಕನ್ನಡ ಭಾಷೆ, ಸಾಹಿತ್ಯ ಜನಪದ ಕಲೆಯನ್ನು ಶಾಶ್ವತವಾಗಿ ಉಳಿಸಲು ಆಲೂರು ತಾಲ್ಲೂಕಿನಲ್ಲಿಯು ಹಲವು ಸಾಹಿತಿ, ಕವಿಗಳು ಶ್ರಮಿಸಿದ್ದಾರೆ. ಇವರ ಒತ್ತಾಸೆಗೆ ಶ್ರಮಿಸೋಣ, ಹಿರಿಯ ಸಾಹಿತಿಗಳಾದ ಪಂಡಿತ್ ಸ್ವಾಮಿಗೌಡ, ಹರಿಹಳ್ಳಿ ರಾಜಾರಾಯ್, ಹೊಸಳ್ಳಿ ರಾಜೇಗೌಡ, ಸೈಯದ್ ಶಹಬುದ್ದೀನ್, ಕೆ. ಬಿ. ಕಲ್ಯಾಣಪ್ಪ ಸೇರಿದಂತೆ ಇತ್ತೀಚಿನ ಯುವ ಸಾಹಿತಿಗಳು ಶ್ರಮಿಸುತ್ತಿದ್ದಾರೆ.
ತಾಲ್ಲೂಕು ಹೊಯ್ಸಳರು ಆಳಿದ ನಾಡು. ಮಗನ ತಿಂದ ಮಹಾರಾಯನ ದುರ್ಗ, ಪಾರ್ವತಮ್ಮನ ಬೆಟ್ಟ, ಲಕ್ಷ್ಮೀ ಜನಾರ್ಧನಸ್ವಾಮಿ, ಕೆಂಚಾಂಬಿಕೆ ದೇವಾಲಯ, ಮರಸು ಗ್ರಾಮದಲ್ಲಿರುವ ಗರುಡಗಂಬ, ನಂಜೆದೇವರಗುಡ್ಡ, ತಾಳೂರು ಆಂಜನೇಯಸ್ವಾಮಿ ದೇವಾಲಯ ಇದಕ್ಕೆ ಸಾಕ್ಷಿಯಾಗಿವೆ. ತಾಲೂಕಿಗೆ ಪೂರ್ವದಲ್ಲಿ ಯಗಚಿ, ಉತ್ತರದಲ್ಲಿ ವಾಟೆಹೊಳೆ, ಧಕ್ಷಿಣದಲ್ಲಿ ಹೇಮಾವತಿ ನದಿಗಳು ನೀರುಣಿಸುತ್ತಿವೆ. ಪುರಾತನ ಕಾಲದ ಜಾನಪದ ಕಲೆಗಳು ನಶಿಸದಂತೆ ಉಳಿಸಲು ಕೆಂಚಾಂಬ ಕಲಾಸಂಘ ಶ್ರಮಿಸುತ್ತಿದೆ.
ತಾಲ್ಲೂಕು ರಾಜಕೀಯವಾಗಿ ಪ್ರತ್ಯೇಕ ಕ್ಷೇತ್ರವಾಗಿ ಹಿಂದುಳಿದ ತಾಲ್ಲೂಕು ಎಂಬ ಪ್ರಖ್ಯಾತಿಯನ್ನು ಅಳಿಸಬೇಕು. ತಾಲ್ಲೂಕು ಕೇಂದ್ರದಲ್ಲಿ ಚಲಿಸುತ್ತಿರುವ ರೈಲು ನಿಲುಗಡೆಯಾಗಬೇಕು. ಇದಕ್ಕೆಲ್ಲ ರಾಜಕೀಯ ಇಚ್ಚಾಶಕ್ತಿ ತುಂಬಲು ಜನಪ್ರತಿನಿದಿಗಳು ಆಸಕ್ತರಾಗಬೇಕು ಎಂದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ರವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಮಾತೃಸಂಸ್ಥೆ. ಕನ್ನಡ ಸಾಹಿತ್ಯ, ಭಾಷೆ ಬೆಳೆಸಲು ಹಲವು ಸಂಘಟನೆಗಳಲ್ಲಿ ಇದೊಂದಾಗಿದೆ ಎಂದರು.
ಹಿರಿಯ ಸಾಹಿತಿ ಎಸ್. ಎಂ. ದೇವರಾಜೇಗೌಡರು ಮಾತನಾಡಿ, ಹೊರದೇಶದಲ್ಲಿರುವ ಕನ್ನಡಿಗಳು ಕನ್ನಡ ಭಾಷೆ ಉಳಿಸಲು ಸಂಘಟಿಸಿ ತಮ್ಮ ಮಕ್ಕಳಲ್ಲಿ ಕನ್ನಡ ಭಾಷೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಖಾಸಗಿ ಶಾಲೆಗಳ ಉಪಟಳದಿಂದ ಸರ್ಕಾರಿ ಶಾಲೆಗಳು ಮೂಲೆ ಗುಂಪಾಗುತ್ತಿವೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಸ್. ಎಸ್. ಶಿವಮೂರ್ತಿ, ಕವಯಿತ್ರಿ ಸಿ. ಎಸ್. ಪೂರ್ಣಿಮ. ಸುಜಲಾದೇವಿ, ಎಚ್. ಎಸ್. ಬಸವರಾಜ್ ಇವರು ಕವಿಗೋಷ್ಠಿಯ ನೇತೃತ್ವ ವಹಿಸಿದ್ದರು. ಇದೆ ಸಂದರ್ಭದಲ್ಲಿ ಎಂ. ಶಿವಣ್ಣ ರವರ ಭೀಮಜ್ಯೋತಿ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.
ಸಮಾರಂಭದಲ್ಲಿ ತಾ. ಘಟಕ ಅಧ್ಯಕ್ಷ ಎಚ್. ಇ. ದ್ಯಾವಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ ಎಸ್ ಮಂಜೇಗೌಡ, ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್, ಬಿಜೆಪಿ ಮುಖಂಡಸಿಮೆಂಟ್ ಮಂಜು, ಹಿರಿಯ ಸಾಹಿತಿ ನಾಗರಾಜ ದೊಡ್ಡಮನಿ, ಗಂಗಮ್ಮ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಹಿರಿಯ ಪತ್ರಕರ್ತ ನಾಗರಾಜ ಹೆತ್ತೂರು