ಬಾಗಲಕೋಟೆ: ಭಾರತದ ಹಲವಾರು ಭಾಷೆಗಳಲ್ಲಿ ಶಾಸ್ತ್ರೀಯ ಸ್ಥಾನಮಾನವನ್ನು ಪಡೆದ ಭಾಷೆಗಳಲ್ಲಿ ಕನ್ನಡವು ಒಂದಾಗಿದೆ. ನಾವು ಕನ್ನಡಿಗರಾಗಿದ್ದೇವೆ ಎಂದು ಅಭಿಮಾನ ಪಡುವುದಕ್ಕೆ ನೂರಾರು ಸಂಗತಿಗಳು ಇವೆ ಎಂದು ಪ್ರಾಚಾರ್ಯ ಟಿ.ಬಿ.ಕೋರಿಶೆಟ್ಟಿ ಹೇಳಿದರು.
ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ಬಿವಿವಿ ಸಂಘದ ಬಸವೇಶ್ವರ ಕಲಾ,ವಿಜಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ನೃಪತುಂಗನು ಕವಿರಾಜಮಾರ್ಗದಲ್ಲಿ ಕನ್ನಡಿಗರ ಅರ್ಹತೆಗಳನ್ನು ಮತ್ತು ಗುಣಗಳನ್ನು ವಿವರಿಸಿದ್ದಾನೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಕುವೆಂಪು ಹೇಳಿದ್ದಾರೆ. ಕನ್ನಡಿಗರು ವಿಶಾಲ ಹೃದಯವುಳ್ಳವರು. ಕನ್ನಡದ ಕನಸು ಸಾಕಾರಗೊಳ್ಳಲು ಶ್ರಮಿಸಿದ ಲಕ್ಷಾಂತರ ಕನ್ನಡ ಹೋರಾಟಗಾರರನ್ನು ನೆನಪಿಸಿಕೊಳ್ಳುವ ದಿವಸ ಕನ್ನಡವನ್ನು ಕಟ್ಟುವ ಬೆಳೆಸುವ ಉಳಿಸುವ ಕಾಯಕ ನಿತ್ಯ ನಿರಂತರವಾದುದು ಕನ್ನಡದ ಭಾಷೆ ಸಂಸ್ಕೃತಿ ನೆಲ ಜಲದ ಹಿತವನ್ನು ಕಾಯಬೇಕು ಎಂಬ ಸಂಕಲ್ಪ ಮಾಡಬೇಕು ಎಂದರು.
ಕನ್ನಡಿಗರು ಕನ್ನಡಾಂಬೆಯ ಕರುಳಬಳ್ಳಿಗಳು ಎಂದು ಹೇಳಿದರು ಕನ್ನಡ ಬಾವುಟದಲ್ಲಿರುವ ಹಳದಿ ಎಂಬುದು ಶಾಂತಿಯ ಸಂಕೇತವಾದರೆ ಕೆಂಪು ಬಣ್ಣವು ಕ್ರಾಂತಿಯ ಸಂಕೇತವಾಗಿದೆ ಎಂದು ಹೇಳಿದರು.
ರಾಜ್ಯೋತ್ಸವದ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಶಿವುಕುಮಾರ ಕುಮಾರಿ ಮೇಘಾ ಅಲಗವಾಡಿಯವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.