ಜೋಡಿ ಹೋಚಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನುಡಿ ನಿತ್ಯೋತ್ಸವ ಕಾರ್ಯಕ್ರಮವನ್ನು ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಆರ್.ಪ್ರಕಾಶ್ ಉದ್ಘಾಟಿಸಿದರು. ಬಸಪ್ಪ, ಮಂಜುನಾಥ್, ಗಂಗಾಧರ ಇತರರಿದ್ದರು.  
ಜಿಲ್ಲೆ

ಕನ್ನಡತನ ಮರೆಯದಿರಿ

ಎಸ್.ಎನ್.ರವೀಂದ್ರ

ಕಡೂರು: ಕರ್ನಾಟಕ ಎಂದರೆ ಬರಿ ನಾಡಲ್ಲ. ಅದು ಕನ್ನಡಿಗರ ಉಸಿರು. ಕನ್ನಡವನ್ನು ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್ ತಿಳಿಸಿದರು.

ಜೋಡಿ ಹೋಚಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನುಡಿ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಎಂದರೆ ಬರೀ ಭಾಷೆಯಲ್ಲ, ಅದು ಭಾವನೆ. ವ್ಯವಹಾರ ಮತ್ತು ಉದ್ಯೋಗಕ್ಕೆ ಬೇರೆ ಭಾಷೆ ಬಳಕೆ ಬೇಕಾದರೂ ಕನ್ನಡತನ ಮರೆಯ ಬಾರದು ಎಂದರು.

ಜೋಡಿಹೋಚಿಹಳ್ಳಿ ಶಾಲೆ ಮುಖ್ಯಶಿಕ್ಷಕ ಮಂಜುನಾಥ್ ಮಾತನಾಡಿ, ಸಿರಿಗನ್ನಡ ವೇದಿಕೆ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತ ಕನ್ನಡ ಬೆಳೆಸುವ ಕೆಲಸ ಮಾಡುತ್ತಿದೆ. ನಮ್ಮ ಶಾಲೆಯಲ್ಲಿ ಆಚರಣೆಗೆ ಅವಕಾಶ ಲಭಿಸಿದೆ ಎಂದರು.

ಜಿಲ್ಲಾ ಜಾಗತಿಕ ಲಿಂಗಾಯತ ವೇದಿಕೆ ಅಧ್ಯಕ್ಷ ಗಂಗಾಧರ ಶಿವಪುರ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಮಹಿಳೆ ಸಾಕಷ್ಟು ಪ್ರಭಾವ ಬೀರಿದ್ದಾಳೆ. ಜೀವನದ ಮುಖ್ಯ ಮಜಲುಗಳನ್ನು ಮಹಿಳೆ ಆಸ್ವಾದಿಸುತ್ತ ಅದಕ್ಕೊಂದು ಸಾಹಿತ್ಯ ರೂಪ ನೀಡಲಾಗಿದೆ ಎಂದರು.

ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷ ಬಸಪ್ಪ, ಮಲ್ಲೇನಹಳ್ಳಿ ನಾಗರಾಜು, ಪಂಚನಹಳ್ಳಿ ಲೋಕೇಶ್, ಮಾದಯ್ಯ, ಶಾರದಮ್ಮ ಹಾಗೂ ಶಿಕ್ಷಕರು ಇದ್ದರು.