ಚಿತ್ರದುರ್ಗ:ಕನ್ನಡಕ್ಕೆ,ಕನ್ನಡ ನಾಡಿಗೆ ಕುವೆಂಪು ಅವರ ಕೊಡುಗೆ ಅಪಾರವಾಗಿದೆ ಎಂದು ಸಾಹಿತಿ ಎಚ್.ಅನಂತ್‌ಕುಮಾರ್ ಹೇಳಿದರು. ಶ್ರೀ ಕಣಿವೆ ಮಾರಮ್ಮ ಸಂಘ ಹಾಗೂ ನಗರ ಕೇಂದ್ರ ಗ್ರಂಥಾಲಯದಿಂದ ಸೋಮವಾರ ನಗರದ ಮಕ್ಕಳ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ಕುವೆಂಪು ನುಡಿ-ನಮನ ಕಾರ‌್ಯಕ್ರಮದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಕುವೆಂಪು ಅವರ ತಮ್ಮ ವೈಚಾರಿಕ ಬರಹ,ಚಿಂತನೆಗಳ ಮೂಲಕ ಶೋಷಿತರ,ದಮನಿತರ ಪರ ಗಟ್ಟಿ ದನಿಯಾಗಿದ್ದಾರೆ ಎಂದರು. ಮುಖ್ಯಗ್ರಂಥಾಲಯದಿಕಾರಿ ಬಸವರಾಜ್‌ಕೊಳ್ಳಿ ಮಾತನಾಡಿ,ವಿಶ್ವ ಮಾನವ ಸಂದೇಶ ಸಾರಿದ ಮಹಾನ್ ಚೇತನ ಕುವೆಂಪು. ಮಹಾನ್ ದಾರ್ಶನಿಕರು,ವ್ಯಕ್ತಿಗಳ ಜೀವನ,ಸಾಧನೆ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಪರಿಸರ ಪ್ರೇಮಿ ಮಾಸ್ಟರ್ ಮಲ್ಲಿಕಾರ್ಜುನ್ ಮಾತನಾಡಿದರು. ಜಿ.ಪಂ.ಮಾಜಿ ಉಪಾಧ್ಯಕ್ಷ ಕೆ.ಪಾಪಯ್ಯ,ಜಾನಪದ ಕಲಾವಿದ ಪ್ಯಾರೇಜಾನ್, ಆಕಾಶವಾಣಿಯ ಡಾ.ನವೀನ್‌ಮಸ್ಕಲ್,ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಪ್ರಹ್ಲಾದ್ ಮತ್ತಿತರರು ಇದ್ದರು.
----