ಜಿಲ್ಲೆ

ಕನ್ನಡಕ್ಕೆ ಇದೆ ಸಾವಿರಾರು ವರ್ಷಗಳ ಇತಿಹಾಸ

ಚಿತ್ರದುರ್ಗ: ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.

ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ‌್ಯಕ್ರಮದಲ್ಲಿ ಮಾತನಾಡಿ, ದೇಶದ 15 ಶಾಸ್ತ್ರೀಯ ಭಾಷೆಗಳಲ್ಲಿ ಕನ್ನಡವೂ ಒಂದು. ಕರ್ನಾಟಕದ ಇತಿಹಾಸಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕೊಡುಗೆ ಇದೆ. ಮೊಳಕಾಲ್ಮೂರು ತಾಲೂಕಿನ ಇಸಿಲ ಗ್ರಾಮದಲ್ಲಿ ಐದು ಸಾವಿರ ವರ್ಷಗಳ ಹಿಂದೆಯೇ ಕನ್ನಡ ಮಾತನಾಡಲಾಗುತ್ತಿತ್ತು ಎಂದರು.

ಐಸಿಎಸ್‌ಇ ಪ್ರಾಚಾರ‌್ಯ ಪಿ.ಬಸವರಾಜಯ್ಯ ಮಾತನಾಡಿ, ಮಾತೃಭಾಷೆಯನ್ನು ಬಳಸೋಣ, ಬೆಳೆಸೋಣವೆಂದರು.

ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ.ಪೃಥ್ವೀಶ್ ಮಾತನಾಡಿ, ಈಚಿನ ದಿನಗಳಲ್ಲಿ ವಿವಿಧ ಕಾರ‌್ಯಕ್ಷೇತ್ರಗಳಲ್ಲಿ ಕನ್ನಡಿಗರೂ ಕೀರ್ತಿ ಪತಾಕೆ ಹಾರಿಸುತ್ತಿರುವುದು ಹೆಮ್ಮೆಯ ವಿಷಯವೆಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ‌್ಯದರ್ಶಿ ಬಿ.ವಿಜಯ್‌ಕುಮಾರ್ ಮಾತನಾಡಿ, ಶಿಕ್ಷಕರ ಪ್ರಯತ್ನ, ಪಾಲಕರ ಸಹಕಾರ ಮಕ್ಕಳ ಉತ್ತಮ ಫಲಿತಾಂಶ, ಭವಿಷ್ಯಕ್ಕೆ ನೆರವಾಗಲಿದೆ ಎಂದರು.

ಮುಖ್ಯಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಸಿಎಸ್‌ಇ ಉಪಪ್ರಾಚಾರ‌್ಯ ಬಿ.ಅವಿನಾಶ್ ಮತ್ತಿತರರು ಇ ದ್ದರು. ಶ್ರೀಶಾರೆಡ್ಡಿ ಮತ್ತು ಶಿಫಾಮರಿಯಂ ನಿರೂಪಿಸಿದರು. ಜಿ.ಆರ್.ತೃಷಾ ಪ್ರಾರ್ಥಿಸಿದರು. ಗ್ರೀಷ್ಮಾ ಸ್ವಾಗತಿಸಿ, ಬಿ.ಎಸ್. ಜಾಹ್ನವಿ ವಂ ದಿಸಿದರು.

ಕಾರ‌್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕಗಳಿಸಿದ ವಿದ್ಯಾರ್ಥಿಗಳಾದ ಕೆ.ಆರ್.ಅಭಿನವ್, ವಿ. ಎಂ.ಯೋಗಿನಿ ಪಡ್ವಿಡಿ, ಎಸ್.ಪರಿಣಿತ, ಅನಘ ಎಚ್.ಕಶ್ಯಪ್, ಆರ್.ಚೇತನ್, ಎಚ್.ಎಂ.ಕೆ.ಶ್ರೇಯಾ, ಪಿ.ಜ್ಞಾನಶ್ರೀ ಅವರಿಗೆ ಮಾಣಿಕ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

(ಸಿಟಿಡಿ 9 ವಿದ್ಯಾವಿಕಾಸ)

ಚಿತ್ರದುರ್ಗವಿದ್ಯಾವಿಕಾಸ ವಿದ್ಯಾಸ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ‌್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕನ್ನಡ ವಿಷಯದಲ್ಲಿ ಶೇ.100 ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಬಿ.ವಿಜಯಕುಮಾ ರ್, ಪಿ.ಬಸವರಾಜಯ್ಯ, ಎಸ್.ಎಂ.ಪೃಥ್ವೀಶ್, ಎನ್.ಜಿ.ತಿಪ್ಪೇಸ್ವಾಮಿ, ಬಿ.ಅವಿನಾಶ್ ಇತರರು ಇದ್ದರು.

----