ಜಿಲ್ಲೆ

ಕನ್ನಡ ಸೈನ್ಯದಿಂದ ಕನ್ನಡ ಉತ್ಸವ

ಕಲಬುರಗಿ: ಸಿದ್ಧಾರ್ಥ ವೃತ್ತ (ಗೋವಾ ಹೋಟೆಲ್) ಟ್ಯಾಂಕ್ ಬಂಡ್ ಮುಖ್ಯ ರಸ್ತೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಹಾ ಮಂಟಪದಲ್ಲಿ ಕನ್ನಡ ಸೈನ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ಕನ್ನಡ ಉತ್ಸವ ಕಾರ್ಯಕ್ರಮಕ್ಕೆ ಶ್ರೀ ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಭಾನುವಾರ ಚಾಲನೆ ನೀಡಿದರು. ಕನ್ನಡ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಸೋಮನಾಥ ಕಟ್ಟಿಮನಿ, ಡಾ.ಸ್ವಾಮಿರಾವ್ ಕುಲಕರ್ಣಿ, ರಾಮಕೃಷ್ಣ ಬಡಶೇಷಿ, ಮಸ್ತಾನ್ ಬಿರಾದಾರ್, ಕುಮಾರ ದೇಶಮುಖ, ಸಂಜೀವಕುಮಾರ ಜೋಗ್, ರಾಕೇಶ ಕಟ್ಟಿಮನಿ, ಗವಾಯಿ ಸೂರ್ಯಕಾಂತ ಶಾಸ್ತಿç, ಜಗನ್ನಾಥ ಚೇಗಂಟೆ, ಶ್ರೀದೇವಿ ಆರ್.ಕೆ., ಮೋಹನ್ ರಾಜ್ ಇದ್ದರು.