ಜಿಲ್ಲೆ

ಕನ್ನಡ ಸಾಹಿತ್ಯ ಭವನ ನಿರ್ಮಾಣ ಕಾಮಗಾರಿ ಪರಿಶೀಲನೆ

ಲಕ್ಷ್ಮೇಶ್ವರ: ನಿರ್ಮಾಣ ಹಂತದಲ್ಲಿರುವ ಪಟ್ಟಣದ ಕನ್ನಡ ಸಾಹಿತ್ಯ ಭವನದ ಕಾಮಗಾರಿಯನ್ನು ಕಸಾಪ ಅಧ್ಯಕ್ಷ, ನಾಡೋಜ ಡಾ. ಮನು ಬಳಿಗಾರ ಶನಿವಾರ ಪರಿಶೀಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ವಣಗೊಳ್ಳಬೇಕೆಂಬ ಉದ್ದೇಶದಿಂದ ಅನೇಕ ತಾಲೂಕುಗಳಿಗೆ ಪ್ರಾರಂಭಿಕ ಹಂತದ 10 ಲಕ್ಷ ರೂ. ಅನುದಾನ ನೀಡಲಾಗಿದೆ. ಅವುಗಳಲ್ಲಿ ಕೆಲವು ಪೂರ್ಣಗೊಂಡಿದ್ದು ಇನ್ನು ಕೆಲವು ಕರೊನಾ ಹಾವಳಿ, ಅನುದಾನ ಕೊರತೆಯಿಂದಾಗಿ ಅರ್ಧಕ್ಕೆ ನಿಂತಿವೆ. ಜಿಲ್ಲಾ ಕಸಾಪ ಅಧ್ಯಕ್ಷರು, ತಮ್ಮ ವ್ಯಾಪ್ತಿಯ ಜನಪ್ರತಿನಿಧಿಗಳು, ದಾನಿಗಳ ಸಹಕಾರದಿಂದ ಕಟ್ಟಡ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಅರ್ಧಕ್ಕೆ ನಿಂತಿರುವ ಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಬೇಕಾದ ಹೆಚ್ಚುವರಿ ಅನುದಾನದ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮುಂದಿನ ಕಸಾಪ ಅಧ್ಯಕ್ಷ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಮನು ಬಳಿಗಾರ ಸ್ಪಷ್ಟಪಡಿಸಿದರು. ಈ ವೇಳೆ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಶರಣು ಗೋಗೇರಿ, ತಾಲೂಕಾಧ್ಯಕ್ಷೆ ಡಾ.ಜಯಶ್ರೀ ಹೊಸಮನಿ, ಸೋಮು ಕೆರಿಮನಿ, ಜೆ.ಆರ್. ರಾಮಶೆಟ್ಟರ್, ಮಹಾದೇವಪ್ಪ ಕೊತ್ತಲ, ಎಸ್.ವಿ. ಕಮ್ಮಾರ, ಸಿ.ಜಿ. ಹಿರೇಮಠ, ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಮೈತ್ರಾದೇವಿ ಹಿರೇಮಠ, ನಾಗರಾಜ ಕಳಸಾಪೂರ, ಎ.ಎಂ.ಗುತ್ತಲ್, ಬಿ.ಎಂ. ಆಲೂರ, ರಾಘವೇಂದ್ರ ಬಳ್ಳಾರಿ, ಎಂ.ಬಿ. ಹೊಸಮನಿ, ಮಹಾಂತೇಶ ಹಳ್ಳೂರ, ಆನಂದ ಮುಳಗುಂದ, ಸಂತೋಷ ಬಿರಾದಾರ, ಬಸವರಾಜ ಹುಲ್ಲತ್ತಿ, ಹಲವರಿದ್ದರು.

EndFragment