ಹಾಸನ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಆರ್. ಗಿರೀಶ್ ತಿಳಿಸಿದ್ದಾರೆ.
ಸನ್ಮಾನಿತರ ವಿವರ: ಕನ್ನಡ ಪರ ಸಂಘಟನೆ ಕ್ಷೇತ್ರದಿಂದ(ನಾಡು) ಕಲ್ಲಹಳ್ಳಿ ಹರೀಶ ಹಾಗೂ ಅರಸೀಕೆರೆಯ ಕೆ.ಎಸ್.ಮಂಜುನಾಥ, ಕನ್ನಡ ಸಾಹಿತ್ಯ ಕ್ಷೇತ್ರ ಕನ್ನಡ ಪರ ಸಂಘಟನೆ(ನುಡಿ)ಯಿಂದ ಹಾಡ್ಲಹಳ್ಳಿ ನಾಗರಾಜ ಹಾಗೂ ಡಾ. ಸಿ.ಚ.ಯತೀಶ್ವರ.
ಗ್ರಾಮೀಣ ಕಲೆ/ಜಾನಪದ ಕ್ಷೇತ್ರದಿಂದ ಹಿರೀಸಾವೆ ಹೋಬಳಿಯನರಸಿಂಹರಾಜಪುರದ ಡಿ.ಜಿ. ಗುರುನಂಜೇಶ, ಕರಗುಂದ ಗ್ರಾಮದ ಕೆ.ಎಸ್ ಉಮಾಪತಿ, ಸಾಂಸ್ಕೃತಿಕ ಕ್ಷೇತ್ರದ ಪೌರಾಣಿಕ ಮತ್ತು ಆಧುನಿಕ ರಂಗಭೂಮಿಯಲ್ಲಿ ಹಾಸನ ತಾಲೂಕು ಸೀಗೆ ಗ್ರಾಮದ ಊ.ಐ. ಪಾಲಕ್ಷಚಾರ್, ಚನ್ನರಾಯಪಟ್ಟಣ ತಾಲೂಕಿನ ಬಂಡೀಹಳ್ಳಿ ಗ್ರಾಮದ ಬಿ.ಎಸ್. ನಾಗರಾಜು, ಹಾಸನ ತಾಲೂಕಿನ ಚನ್ನಪಟ್ಟಣ ಶಿಕ್ಷಕರ ಬಡಾವಣೆಯ ಕೆ. ರಾಘವೇಂದ್ರ ಕುಮಾರ್, ಹಾಸನದ ಜಯನಗರ ಬಡಾವಣೆಯ ಪೂಜಾ ರಘುನಂದನ್, ಬೇಲೂರು ತಾಲೂಕಿನ ಮಾದಿಹಳ್ಳಿ ಹೋಬಳಿಯ ಅಡಗೂರು ಗ್ರಾಮದ ಎ.ಜಿ. ವಿಶ್ವನಾಥ್
ಚಿತ್ರಕಲೆ ವಿಭಾಗದಲ್ಲಿ ಅರಸೀಕೆರೆಯ ಕೆ.ಬಿ. ಚಂದ್ರಕಾಂತ ಮತ್ತು ಪತ್ರಿಕೋದ್ಯಮ ಕ್ಷೇತ್ರದಿಂದ ಸುವರ್ಣ ನ್ಯೂಸ್ ವರದಿಗಾರರಾದ ಕೆ.ಎಂ. ಹರೀಶ್ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.