ಚಿಕ್ಕಮಗಳೂರಿನ ಯೇಸು ಪ್ರಾರ್ಥನೆ ಮಂದಿರ ತಮಿಳು ಕಾಲನಿಯಲ್ಲಿ ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ರಾಜ್ಯ ಘಟಕದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಸಲಾಯಿತು. ಜೋಸೆಫ್, ಲಕ್ಷö್ಮಣ್, ಹರೀಶ್ ಮಿತ್ರ, ಶ್ರೀಧರ ಸ್ಯಾಮುವೆಲ್ ಮತ್ತಿತರರಿದ್ದರು. 
ಜಿಲ್ಲೆ

ಕನ್ನಡ ರಾಜ್ಯೋತ್ಸವ ಆಚರಣೆ ಭಾಷೆ ಬೆಳವಣಿಗೆಗೆ ಪೂರಕ

ಚಿಕ್ಕಮಗಳೂರು: ಕನ್ನಡ ಭಾಷೆ ನಶಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಭಾಷೆ ಬೆಳವಣಿಗೆಗೆ ಪೂರಕ ಎಂದು ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಜೋಸೆಫ್ ತಿಳಿಸಿದರು.

ನಗರದ ಯೇಸು ಪ್ರಾರ್ಥನೆ ಮಂದಿರ ತಮಿಳು ಕಾಲನಿಯಲ್ಲಿ ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ರಾಜ್ಯ ಘಟಕದಿಂದ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ೭ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಸಾವಿರಾರು ವರ್ಷದ ಇತಿಹಾಸವಿರುವ ಕನ್ನಡ ಭಾಷೆ ಹಣದ ನೋಟ್ ಮೇಲೆ ಐದನೇ ಲೈನ್‌ನಲ್ಲಿರುವುದು ಕನ್ನಡಿಗರ ಹೆಮ್ಮೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಲಕ್ಷö್ಮಣ್, ಹರೀಶ್ ಮಿತ್ರ, ರಾಜ್ಯ ಯುವ ಉಪಾಧ್ಯಕ್ಷ ಶ್ರೀಧರ್ ಸಾಮುವೆಲ್, ಸಂಚಾಲಕ ರಮೇಶ್ ಫ್ರಾನ್ಸಿಸ್, ಸಹ ಕಾರ್ಯದರ್ಶಿ ಸಂತೋಷ್ ಜಾರ್ಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುನೀತ್, ಸಹ ಕಾರ್ಯದರ್ಶಿ ಚಂದ್ರು, ಖಜಾಂಚಿ ವಿಜಯ್, ಮೂಡಿಗೆರೆ ತಾಲೂಕು ಅಧ್ಯಕ್ಷ ದಿನೇಶ್ ಮತ್ತಿತರರಿದ್ದರು.