ಹುಬ್ಬಳ್ಳಿ: ಶ್ರೀ ರಾಜರಾಜೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘ, ಅಶ್ವಮೇಧ ಪಾರ್ಕ್ ಹಿರಿಯ ನಾಗರಿಕರ ಸಂಘದ ಆಶ್ರಯದಲ್ಲಿ ನವನಗರದ ಅಧ್ಯಾಪಕ ನಗರದ ಮುಗಳಖೋಡ ಮಠದಲ್ಲಿ ರಾಜ್ಯೋತ್ಸವ ನಿಮಿತ್ತ ಸಸಿ ನೆಡಿಸಲಾಯಿತು. ಕನ್ನಡ ಪ್ರಾಧ್ಯಾಪಕ ಪ್ರೊ.ಕೆ.ಎಸ್. ಕೌಜಲಗಿ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಕನ್ನಡ ಭಾಷೆ ಕೇಂದ್ರ ಸ್ಥಾನವಾಗಿತ್ತೆಂದರು.
ಜಾನಪದ ತಜ್ಞ ಡಾ. ರಾಮು ಮೂಲಗಿ ಮಾತನಾಡಿದರು. ಸಂಘದ ಅಧ್ಯಕ್ಷ ಕಲ್ಲಪ್ಪ ಮರದಣ್ಣವರ ಅಧ್ಯಕ್ಷತೆ ವಹಿಸಿದ್ದರು. ದಾನೇಶ ಬುರಡಿ ಪ್ರಾರ್ಥಿಸಿದರು. ಎಂ.ವೈ. ಜಯಪ್ಪನವರು ಸ್ವಾಗತಿಸಿದರು. ಅಶೋಕ ಬದಾಮಿ ವಂದಿಸಿದರು. ಬಿ.ಎಸ್. ಮಾಳವಾಡ ನಿರೂಪಿಸಿದರು. ಗಣ್ಯರಾದ ಆರ್.ಎಚ್. ಚಿಕ್ಕಮಠ, ಉದಯ ಜೋಳದ, ಪುಂಡಲೀಕ ಕದಮನರ್, ವಿಠ್ಠಲ ಪನಸೆ, ಚನ್ನಬಸವರಾಜ ಚಿನಗಿ, ಸುಭಾಷ್ ತೋಗರಗಲ್, ರವಿರಾಜ ಕುರಬಟ್ಟ, ಶರಣಬಸವೇಶ ಏರಿಮನಿ, ನಿಂಗನಗೌಡ ಪಾಟೀಲ, ಇಮ್ಮಣ್ಣ ದರಗಾದ್ ಇದ್ದರು.
ನವನಗರ: ರಾಜ್ಯೋತ್ಸವ ನಿಮಿತ್ತ ಜೈ ಕರ್ನಾಟಕ ಯುವಕ ಮಂಡಳದಿಂದ ನವನಗರದ ಕರ್ನಾಟಕ ವೃತ್ತದಲ್ಲಿ ಲೋಕ ಕಲ್ಯಾಣಕ್ಕಾಗಿ ಮಹಾ ಮೃತ್ಯುಂಜಯ ಹಾಗೂ ಧನ್ವಂತರಿ ಯಾಗ ಏರ್ಪಡಿಸಲಾಗಿತ್ತು. ನಂತರ ತಾಯಿ ಭುವನೇಶ್ವರಿ ಪೂಜೆಯೊಂದಿಗೆ ಧ್ವಜಾರೋಹಣ ನೆರವೇರಿಸಲಾಯಿತು. ಇನ್ಸ್ಪೆಕ್ಟರ್ ಎಸ್.ಎಸ್. ಜಕ್ಕನಗೌಡ್ರ, ಸಂಘದ ಅಧ್ಯಕ್ಷ ಸ್ವಾಮಿ ಮಹಾಜನಶೆಟ್ಟರ, ಸದಸ್ಯರಾದ ಶಿವು ಪೂಜಾರ, ಮಂಜುನಾಥ ಹಳ್ಳೂರ, ಭೀಮಪ್ಪ ಜಾವೂರ, ಕಿರಣ ನಾವಳ್ಳಿ, ಮುಹಮ್ಮದ್ ದೊಡ್ಡಮನಿ ಇತರರಿದ್ದರು.