ಜಿಲ್ಲೆ

ಕನ್ನಡ ಭಾಷೆ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಲಿ

ಮಾಂಜರಿ: ಕನ್ನಡ ಭಾಷೆ ಶ್ರೀಮಂತಗೊಳಿಸುವಲ್ಲಿ ಮಠ, ಮಂದಿರ ಮತ್ತು ಬಸದಿಗಳ ಪಾತ್ರ ಪ್ರಮುಖವಾಗಿದೆ. ಕನ್ನಡ ಭಾಷೆ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಸಾಹಿತಿ ಪ್ರೊ. ಬಿ.ಎಸ್.ಗವಿಮಠ ಹೇಳಿದರು.

ಸಮೀಪದ ಗಳತಗಾ ಗ್ರಾಮದ ಕೆಎಲ್‌ಇ ಸಂಸ್ಥೆಯ ಪಂಡಿತಪ್ಪ ಆರ್. ಚಿಕ್ಕೋಡಿ ನ್ಯೂ ಸೆಕಂಡರಿ ಸ್ಕೂಲ್‌ನ ಶನಿವಾರ ಹಮ್ಮಿಕೊಂಡಿದ್ದ ೧೯೭೨-೭೫ ವಿದ್ಯಾರ್ಥಿಗಳ ಗುರುವಂದನೆ, ಸುವರ್ಣ ಮಹೋತ್ಸವ ಹಾಗೂ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ೧೯೬೫ರಲ್ಲಿ ಕೆಎಲ್‌ಇ ಸಂಸ್ಥೆಯ ಗಳತಗಾ ಶಾಲೆ ಸ್ಥಾಪನೆಯಲ್ಲಿ ಶಿಕ್ಷಣ ಪ್ರೇಮಿಗಳಾದ ಮಾನೆ, ನಸಲಾಪುರೆ, ಚೌಗಲೆ, ರೂಗೆ, ಗಿಂಡೆ ಕುಟುಂಬ ಹಾಗೂ ದಿ. ಸಿದ್ದಣ್ಣ ಮಸಳಿ ಅವರ ಕೊಡುಗೆ ಶ್ಲಾಘನೀಯ ಎಂದರು.

ಸಾನ್ನಿಧ್ಯ ವಹಿಸಿ ಚಿಕ್ಕೋಡಿ ಚರಮೂರ್ತಿಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಗುರುವಂದನೆ ಸಲ್ಲಿಸಿ, ಜೀವನದ ಅನುಭವ ಹಂಚಿಕೊAಡಿದ್ದು ಸಂತೋಷದ ಸಂಗತಿ ಎಂದರು.

ವೀರಣ್ಣ ಹಡಗಿನಹಾಳ, ಬಿ.ಎ. ಖೋತ್, ಜಿ.ಎಲ್.ಹತ್ತೋಟೆ, ಬಿ.ಆರ್.ಅಕಿವಾಟೆ, ನಿಸರ್ಗ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಪಾಟೀಲ ಮಾತನಾಡಿದರು. ಸಂಪಾದನಾ ಶ್ರೀ ಆಶೀರ್ವಚನ ನೀಡಿದರು. ಭಾವುಸಾಹೇಬ ತಹಸೀಲ್ದಾರ್, ಆರ್.ಡಿ.ಪಾಟೀಲ, ಧರಿಗೌಡ ಪಾಟೀಲ, ಅಶೋಕ ಚೌಗುಲೆ, ಮಹಾದೇವ ಹಿರೇಮಠ, ಶಿವಮೂರ್ತಿ ಬುರ್ಗೆ, ಶೀತಲ ಚೌಗುಲೆ, ಪೂಜಾ ಖೋತ, ಶ್ರೀಮತಿ ಪಾಟೀಲ ಇತರರಿದ್ದರು.