ಮೂಡಲಗಿ: ಸಾಹಿತ್ಯ ಮತ್ತು ಕಲಾ ಪರಂಪರೆ ಬೆಳೆಸಲು ನಾಡಹಬ್ಬ ಮಹತ್ವದ ವೇದಿಕೆಯಾಗಿದೆ. ಕನ್ನಡ ಭಾಷೆ ನಮ್ಮ ಅಸ್ಮಿತೆ ಮತ್ತು ಶಕ್ತಿಯಾಗಿದೆ ಎಂದು ಕಸಾಪ ಅಧ್ಯಕ್ಷ ಡಾ.ಸಂಜಯ ಶಿಂಧೆಹಟ್ಟಿ ಹೇಳಿದರು.
ಸಮೀಪದ ಕಲ್ಲೋಳಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಬಸವೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಾಡಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತಿ ವಿದ್ಯಾರೆಡ್ಡಿ ಮಾತನಾಡಿ, ಯಾವುದೇ ಭಾಷೆ ಜನಸಾಮಾನ್ಯರ ಬದುಕಿನ ಭಾಗವಾದಾಗ ಮಾತ್ರ ಬೆಳೆಯುತ್ತದೆ. ಇಂಥ ಕಾರ್ಯಕ್ರಮಗಳು ನಮ್ಮ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುತ್ತವೆ ಎಂದರು.
ಸಂಸ್ಥೆಯ ಅಧ್ಯಕ್ಷ ರಮೇಶ ಬೆಳಕೂಡ ಮಾತನಾಡಿ, ಕನ್ನಡದ ಕಲಾವಿದರು ಮತ್ತು ವಿದ್ವಾಂಸರಿಗೆ ಪ್ರೋತ್ಸಾಹ ನೀಡಿದರೆ ಕನ್ನಡ ಬೆಳೆಯುತ್ತದೆ ಎಂದರು. ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಿತು. ಸಂಸ್ಥೆಯ ಆಡಳಿತಾಧಿಕಾರಿ ಪ್ರಕಾಶ ಗರಗಟ್ಟಿ, ಡಾ.ಎಸ್.ಎಸ್.ಹೂಗಾರ, ರಮೇಶ ಹೆಬ್ಬಾಳ, ಲಕ್ಷ್ಮೀ ನೀಲಣ್ಣವರ,
ಬಿ.ಆರ್.ತರಕಾರ, ಎ.ಎಚ್.ವಂಟಗುಡಿ ಇತರರಿದ್ದರು.