ಜಿಲ್ಲೆ

ಕನ್ನಡ ಭಾಷೆ ಉಳಿಸಿ, ಬೆಳೆಸಲು ಶ್ರಮಿಸಿ

ಚಿಂಚೋಳಿ: ಗಡಿ ಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಶಾದಿಪುರ ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಸಾಯಿಬಣ್ಣ ಅಭಿಪ್ರಾಯಪಟ್ಟರು.

ಕುಂಚಾವರA ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್‌ನಿಂದ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ಝೇಂಕಾರ ವಿಶೇಷ ಉಪನ್ಯಾಸ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಗಡಿಯಲ್ಲಿ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ನಡೆಸಬೇಕು. ವ್ಯಾಪಾರಿಗಳು ಕಡ್ಡಾಯವಾಗಿ ತಮ್ಮ ಅಂಗಡಿಗಳ ಮೇಲೆ ಕನ್ನಡದಲ್ಲಿಯೇ ನಾಮ ಫಲಕಗಳು ಅಳವಡಿಸಬೇಕು. ಕನ್ನಡ ಭಾಷೆಯಲ್ಲಿಯೇ ಎಲ್ಲರೊಂದಿಗೆ ವ್ಯವಹರಿಸಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಶಿಕ್ಷಕ ಮೌಲಾನಾ ಪಟೇಲ್, ಸಾಹಿತ್ಯ ಪರಿಷತ್ ಸದಸ್ಯ ಮೋಹನ ಚವ್ಹಾಣ್ ಅವರನ್ನು ಸನ್ಮಾನಿಸಲಾಯಿತು. ಪರಿಷತ್ ತಾಲೂಕು ಅಧ್ಯಕ್ಷ ಸುರೇಶ ದೇಶಪಾಂಡೆ, ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮುಖ್ಯಗುರು ಸಂತೋಷ, ಪ್ರಮುಖರಾದ ಗೋಪಾಲ ಯಂಪಳ್ಳಿ, ರೇವಣಸಿದ್ದಪ್ಪ, ಗುರುರಾಜ ಕುಲಕರ್ಣಿ, ಮಹೇಶ ಸ್ವಾಮಿ, ಕರುಣಾದೇವಿ, ರೇವಣಸಿದ್ದಪ್ಪ, ಬಸಮ್ಮ, ಅಂಜನಾ ಇತರರಿದ್ದರು.