ಎಚ್.ಡಿ.ಕೋಟೆ: ಕನ್ನಡವನ್ನು ಹೆಚ್ಚಾಗಿ ಬಳಸುವ ಮೂಲಕ ಭಾಷೆಯ ಅಸ್ತಿತ್ವವನ್ನು ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೇಳಿದರು.
ತಾಲೂಕಿನ ಸೋಗಹಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ನಮ್ಮ ಮಾತೃ ಭಾಷೆ. ನಮ್ಮ ಭಾಷೆಯ ಬಗ್ಗೆ ಅಭಿಮಾನವಿರಬೇಕು. ಕರ್ನಾಟಕವೆಂದರೆ ಪ್ರಗತಿಪರ ರಾಜ್ಯ. ಕನ್ನಡ ಭಾಷೆ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ ದೇಶದೆಲ್ಲೆಡೆ ಇದೆ. ಹಾಗಾಗಿ ನಮ್ಮ ಭಾಷೆಗೆ ಕನ್ನಡಿಗರಾದ ನಾವು ಹೆಚ್ಚು ಒತ್ತು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕರ ತಾಯಿ ನಾಗಮ್ಮ, ನಾಯಕ ಸಮಾಜದ ತಾಲೂಕು ಅಧ್ಯಕ್ಷ ದೊಡ್ಡನಾಯಕ, ಆದಿ ಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಕಾಂಗ್ರೆಸ್ ಮುಖಂಡರಾದ ಹಿರೇಹಳ್ಳಿ ಸೋಮೇಶ್, ನರಸೀಪುರ ರವಿ, ನಾಗನಹಳ್ಳಿ ಪ್ರದೀಪ್, ಸತೀಶ್‌ಗೌಡ, ಬಾಲಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ರಮಣ್ಯ, ಉಪಾಧ್ಯಕ್ಷೆ ಲೋಲಮ್ಮ ಕಾಂತನಾಯಕ, ಸದಸ್ಯರಾದ ರತ್ನಮ್ಮ, ದೊರೆಸ್ವಾಮಿ, ರೇಖಾ ಗುರುಸ್ವಾಮಿ, ಶಿಕ್ಷಕ ಕೃಷ್ಣನಾಯಕ, ಮುಖಂಡರಾದ ಮರಿದೇವ, ವೆಂಕಟಚಲ, ಬಸಪ್ಪ ಇದ್ದರು.