ಚಿತ್ರದುರ್ಗ:ನಗರದಲ್ಲಿ ಕನ್ನಡ ಭವನ ನಿರ್ಮಿಸಲು 3 ಕೋಟಿ ರೂ.ಅನುದಾನ ಒದಗಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ. ಶಿವ ಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ನಗರದಲ್ಲಿ ಶುಕ್ರವಾರ ಮನವಿ ಮಾಡಿದರು.
ಕನ್ನಡ ಭವನ ಜಿಲ್ಲೆ ಸಾಹಿತ್ಯಾಸಕ್ತರ ದಶಕಗಳ ಕನಸಾಗಿದೆ. ಪರಿಷತ್‌ಗೆ ಪಿಳ್ಳೇಕೇರನಹಳ್ಳಿ ಬಾಪೂಜಿ ಕಾಲೇಜು ಬಳಿ ವಿಶಾಲ ನಿವೇಶನವಿದೆ. ಆದರೆ ಕಟ್ಟಡ ನಿರ್ಮಿಸಲು ಅನುದಾನವಿಲ್ಲವೆಂದು ಸಚಿವರ ಗಮನ ಸೆಳೆದರು. ಈ ವೇಳೆ ಅಧ್ಯಕ್ಷರು,ಪರಿಷತ್ ಪದಾಧಿಕಾರಿಗಳೊಂದಿಗೆ ಚರ್ಚಿಸಿದ ಸ ಚಿವರು, ಆದ್ಯತೆ ಮೇರೆಗೆ ಡಿಎಂಎಫ್,ಕನ್ನಡ ಮತ್ತು ಸಂಸ್ಕೃತಿ ಮತ್ತಿತರ ಇಲಾಖೆಗಳಿಂದ ಅನುದಾನ ಒದಗಿಸುವ ಭರವಸೆ ನೀಡಿದರು. ಭವನಕ್ಕೆ ಯೋಜನೆ ಮತ್ತು ಅಂದಾಜು ಸಿದ್ಧಪಡಿಸುವಂತೆ ಸೂಚಿಸಿದರು. ಚಿತ್ರದುರ್ಗ ತಾಲೂಕು ಕಸಾಪ ಅಧ್ಯಕ್ಷ ವಿ.ಎಲ್.ಪ್ರಶಾಂತ್,ಕಾರ‌್ಯದರ್ಶಿ ವಿ.ಶ್ರೀನಿವಾಸ, ಖಜಾಂಚಿ ಸಿ.ಲೋಕೇಶ ಮತ್ತಿತರರಿದ್ದರು.