ಕಲಬುರಗಿ: ಭಾಷೆ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ತಲೆ ಮಾರಿನಿಂದ ಬಳಸುತ್ತಿರುವ ಭಾಷೆಗೆ ಒಂದು ಸಾಂಸ್ಕೃತಿಕ ಆವರಣ ಬಂದಿದ್ದು, ಅದಕ್ಕೆ ನಾವು ಮಾತೃಭಾಷೆ ಎನ್ನುತ್ತೇವೆ. ಅದೇ ನಮ್ಮ ಜೀವನವಾಗುತ್ತದೆ. ಆದ್ದರಿಂದ ಬದುಕು, ಭಾಷೆ ಬೇರೆಯಲ್ಲ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು.
ನಗರದ ಕನ್ನಡ ಭವನದ ಪ್ರಾಂಗಣದಲ್ಲಿ ಲಿಂ.ಲಕ್ಷ್ಮೀಬಾಯಿ ಗೌಡತಿ ಎಚ್.ಪೊ.ಪಾಟೀಲ ಹಾಗೂ ಲಿಂ. ಮಲ್ಕಣ್ಣಗೌಡ ಪೊ.ಪಾಟೀಲ್ ಕಲ್ಲೂರ ಸ್ಮರಣಾರ್ಥ ಬಿ.ಎಂ.ಪಾಟೀಲ್ ಕಲ್ಲೂರ ಅವರಿಂದ ನಿರ್ಮಿಸುತ್ತಿರುವ ಒಂದು ಸಭಾ ಕೊಠಡಿಯ ಅಡಿಗಲ್ಲು ನೆರವೇರಿಸಿ ಮಾತನಾಡಿ, ಕನ್ನಡ ಭವನದ ಅಭಿವೃದ್ಧಿಗಾಗಿ, ಬಾಕಿ ಉಳಿದ ಕಾಮಗಾರಿಗಳಿಗಾಗಿ ಮಂಡಳಿಯಿAದ ಸೂಕ್ತ ಅನುದಾನ ಒದಗಿಸಿಕೊಡುತ್ತೇನೆ ಎಂಬ ಭರವಸೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಮಾತನಾಡಿ, ಸರ್ಕಾರದ ಜತೆಗೆ ಸಾಹುಕಾರರ ಸಹಾಯ ಪಡೆದು ಕನ್ನಡ ಭವನದ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ. ಪರಿಷತ್‌ನಿಂದ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಭವನದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಕನ್ನಡದ ಸಂಸ್ಕೃತಿಯ ಚಿಂತನೆ ಸ್ಮರಿಸಲಾಗುತ್ತಿದೆ. ಕನ್ನಡ ಕಟ್ಟುವ ಕಾರ್ಯಕ್ಕೆ ಸರ್ವರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶಾಸಕ ಅಲ್ಲಮಪ್ರಭು ಪಾಟೀಲ್, ಎಚ್‌ಕೆಇ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಪ್ರಮುಖರಾದ ರುದ್ರಗೌಡ ಪಾಟೀಲ್ ಕಲ್ಲೂರ, ಸಂಗಣ್ಣಗೌಡ ಪಾಟೀಲ್ ಕಲ್ಲೂರ, ಬಿ.ಎಂ.ಪಾಟೀಲ್ ಕಲ್ಲೂರ, ರಾಜಶೇಖರ ಸಿರಿ, ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಟಗಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ಬಸ್ವಂತರಾಯ ಕೋಳಕೂರ, ಬಾಬುರಾವ ಪಾಟೀಲ್, ಶ್ರೀಕಾಂತ ಪಾಟೀಲ್ ತಿಳಗೂಳ, ದೌಲತರಾವ ಮಾಲಿ ಪಾಟೀಲ್, ಶರಣಕುಮಾರ ಬಿಲ್ಲಾಡ, ವಿಶ್ವನಾಥ ಪಾಟೀಲ ಗೌನಳ್ಳಿ, ಮಂಜುನಾಥ ಕಂಬಾಳಿಮಠ, ಗುರುಬಸಪ್ಪ ಸಜ್ಜನಶೆಟ್ಟಿ, ಚಂದ್ರಶೇಖರ ಪಾಟೀಲ ಯಳಸಂಗಿ, ಸಂಗಣ್ಣಗೌಡ ಪಾಟೀಲ ಗುಲ್ಯಾಳೆ ಇತರರಿದ್ದರು.