ಚಿಕ್ಕಮಗಳೂರಿನ ಅಂಬೇಡ್ಕರ್ ರಸ್ತೆಯ ಜ್ಯೋತಿ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಜಯಕರ್ನಾಟಕ ಸಂಘಟನೆಯ ಮುಖಂಡ ಕೆ.ಆರ್ ಅನೀಲ್‌ಕುಮಾರ್ ಮಾತನಾಡಿದರು. ಜಿ.ಶಂಕರ್, ವಿಜಯಕುಮಾರ್, ಲೋಹಿತ್ ಕುಮಾರ್, ಅಶೋಕ್, ಮಣಿ ಮತ್ತಿತರರಿದ್ದರು. 
ಜಿಲ್ಲೆ

ಕನ್ನಡ ಬಳಸಿ ಭಾಷಾಭಿಮಾನ ಮೆರೆಯಿರಿ

ಚಿಕ್ಕಮಗಳೂರು: ಕರ್ನಾಟಕದಲ್ಲಿ ಹಲವು ಭಾಷಿಕರಿದ್ದರೂ ಸಹ ಕನ್ನಡ ಬಳಸುವ ಮೂಲಕ ಕನ್ನಡಾಭಿಮಾನ ಮೆರೆಯಬೇಕು ಎಂದು ಜಯಕರ್ನಾಟಕ ಸಂಘಟನೆಯ ಮುಖಂಡ ಕೆ.ಆರ್ ಅನೀಲ್‌ಕುಮಾರ್ ತಿಳಿಸಿದರು.

ನಗರದ ಅಂಬೇಡ್ಕರ್ ರಸ್ತೆಯ ಜ್ಯೋತಿ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಎಂಬುದು ಬಹು ಪ್ರಾಚೀನ ಭಾಷೆಯಾಗಿದ್ದು, ಇದು ಮಾತನಾಡಲು ಬಹು ಸರಳ ಮತ್ತು ಜೇನಿನಷ್ಟೇ ಸವಿಯಾದುದ್ದು ಎಂದು ಬಣ್ಣಿಸಿದರು.

ದೇಶದ ನೋಟುಗಳಲ್ಲಿ ಮುದ್ರಣಗೊಂಡಿರುವ ೧೪ ಭಾಷೆಗಳ ಪೈಕಿ ಕನ್ನಡಕ್ಕೆ ೪ನೇ ಸ್ಥಾನ ನೀಡುವ ಮೂಲಕ ಕನ್ನಡ ಭಾಷೆಗಿರುವ ಪ್ರಾಧಾನ್ಯತೆಯನ್ನು ಎತ್ತಿಹಿಡಿದಿರುವುದು ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ. ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿದರೂ ಮನೆಯಿಂದ ಹೊರಗೆ ಬಂದಾಕ್ಷಣ ಕನ್ನಡ ಮಾತನಾಡುವ ಮೂಲಕ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದರು.

ಸ್ಥಳೀಯ ಮುಖಂಡ ಜಿ.ಶಂಕರ್ ಮಾತನಾಡಿ, ಭಾಷಾವಾರು ಪ್ರಾಂತಗಳಾಗಿ ವಿಂಗಡಿಸಿದ ಸಂದರ್ಭಗಳಲ್ಲಿ ಹರಿದು ಹಂಚಿಹೋಗಿದ್ದ ಪ್ರಾಂತಗಳನ್ನು ಒಗ್ಗೂಡಿಸುವ ಮೂಲಕ ಕರ್ನಾಟಕವನ್ನು ಏಕೀಕರಣಗೊಳಿಸಿದ ಮಹತ್ ಕಾರ್ಯದಲ್ಲಿ ಹಲವು ಹಿರಿಯರು ಶ್ರಮಿಸಿದ್ದು ಅವರೆಲ್ಲರೂ ಪ್ರಾತಃಸ್ಮರಣೀಯರು ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಯುವಕರಾದ ವಿಜಯಕುಮಾರ್, ಲೋಹಿತ್‌ಕುಮಾರ್, ಅಶೋಕ್, ಮಣಿ, ಅಪ್ರೋಜ್, ನಾಸೀರ್, ವೆಂಕಟೇಶ್, ಹುಸೇನ್, ಆನಂದ್ ಮತ್ತಿತರರಿದ್ದರು.